ಸುಳ್ಯ:ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ ಮಂಗಳೂರು( ಮಾಸ್ ಲಿಮಿಟೆಡ್ಡ್ ವತಿಯಿಂದ ಮುರುಳ್ಯ ಎಣ್ಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನಿಂತಿಕಲ್ಲು ಇದರ ಸಹಯೋಗದಲ್ಲಿ ಸಹಕಾರ ರತ್ನ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸಹಕಾರದೊಂದಿಗೆ ಅಡಿಕೆ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭ ನ.25ರಂದು ಸೋಮವಾರ ಪೂ.10.30ಕ್ಕೆ ನಿಂತಿಕಲ್ಲು ‘ಸಾಧನಾ ಸಹಕಾರಿ ಸೌಧ’ದಲ್ಲಿ ನಡೆಯಲಿದೆ ಎಂದು ಮಾಸ್ ಲಿಮಿಟೆಡ್‌ನ ಅಧ್ಯಕ್ಷರಾದ ಕೆ.ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಅವರು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸುವರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಗೊಟ್ಟು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುರುಳ್ಯ- ಎಣ್ಣೂರು ಪ್ರಾಥಮಿಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕುಸುಮಾವತಿ ರೈ ಕೆ.ಜಿ, ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ಸುವರ್ಣ ಬಿ. ಜನತಾ ಬಜಾರ್ ಮಂಗಳೂರು ಇದರ ಮಾಜಿ ಅಧ್ಯಕ್ಷರಾದ ಪ್ರಸನ್ನ ಕೆ. ಭಾಗವಹಿಸಲಿದ್ದಾರೆ. ಅಲ್ಲದೆ ಪ್ರಗತಿಪರ ಕೃಷಿಕರಾದ ಪಿ. ರಾಮಚಂದ್ರ ಭಟ್ ದೇವಸ್ಯ ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ವಸಂತ ನಡುಬೈಲು, ಎಡಮಂಗಲ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ದಿವ್ಯಾ ಯೋಗಾನಂದ ಉಳ್ಳಲಾಡಿ, ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.
ಮಾಸ್ ಲಿಮಿಟೆಡ್ ಕುರಿತು:
ಅಡಿಕೆ ದರ ರೂ ಕಿಲೊ ಒಂದರ ರೂ.30-35ರ ವರೆಗೆ ಕುಸಿದಾಗ, 2001ರಲ್ಲಿ ಜಿಲ್ಲೆಯ ಸಹಕಾರಿಗಳ ಮತ್ತು ಬೆಳೆಗಾರರ ಚಿಂತನೆ ಮೂಲಕ ‘ಮಾಸ್ ಲಿಮಿಟೆಡ್’ ಸಂಸ್ಥೆಯು ಪ್ರಾರಂಭವಾಯಿತು. “ಸಹಕಾರಿ ರತ್ನ” ವಾರಣಾಸಿ ಸುಬ್ರಾಯ ಭಟ್ ಹಾಗೂ ದ.ಕ. ಜಿಲ್ಲಾ ಕೇಂದ್ರ
ಅಧ್ಯಕ್ಷರಾದ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಅವರ ಮಾರ್ಗದರ್ಶನದೊಂದಿಗೆ ಜಿಲ್ಲೆಯ ಸಹಕಾರಿಗಳು ಮತ್ತು ಅಡಿಕೆ ಬೆಳೆಗಾರರು ಸೇರಿ “ಮಾಸ್ ಲಿಮಿಟೆಡ್” ಸಂಸ್ಥೆಯನ್ನು ಹುಟ್ಟುಹಾಕಿದರು. ಸಂಸ್ಥೆಯು ಕೃಷಿಕರ ಅಡಿಕೆಯನ್ನು ಉತ್ತಮ ಬೆಲೆಗೆ ಖರೀದಿಸಿ, ಸಂಸ್ಕರಿಸಿ, ಉತ್ತರ ಭಾರತಕ್ಕೆ ಮಾರಾಟ ಮಾಡುವ ಮೂಲಕ ಅಡಿಕೆ ಬೆಲೆಯಲ್ಲಿ ಸ್ಥಿರತೆ ಮತ್ತು ವರ್ಷವಿಡೀ ಕೃಷಿಕರ ಅಡಿಕೆ ಖರೀದಿಗೆ ಮಾರುಕಟ್ಟೆಯನ್ನು ಒದಗಿಸುತ್ತಾ ಬಂದಿದೆ.
ಸಂಘದ ಕೇಂದ್ರ ಕಛೇರಿಯು ಮಂಗಳೂರಿನ ಬೈಕಂಪಾಡಿಯ ಎ.ಪಿ.ಎಂ.ಸಿ. ಆವರಣದೊಳಗೆ ಇದೆ. 2024 ಮಾ.13ರಂದು ‘ಸಹಕಾರಿ ರತ್ನ’ ಕೆ. ಸೀತಾರಾಮ ರೈ ಸವಣೂರು ಅವರು ಸಂಸ್ಥೆಯ ಅಧ್ಯಕ್ಷರಾಗಿ ಸಂಸ್ಥೆಯನ್ನು ಮುನ್ನಡೆಸುತ್ತಾ ಬಂದಿದ್ದಾರೆ. ಪ್ರಕೃತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಂಸ್ಥೆಯು 10 ಖರೀದಿ ಕೇಂದ್ರಗಳನ್ನು ಹೊಂದಿದ್ದು ಪ್ರತಿದಿನವೂ ಸದಸ್ಯ ಕೃಷಿಕರ ಅಡಿಕೆಯನ್ನು ಖರೀದಿಸುತ್ತಿದೆ
ನಿಟ್ಟಿನಲ್ಲಿ ಜುಲೈ9 2024ರಂದು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಇವರ ಸಹಯೋಗದೊಂದಿಗೆ ಕಾವು ಶಾಖೆಯನ್ನು ಪ್ರಾರಂಭಿಸಿ ಮುಂದಿನ ಹೆಜ್ಜೆಯನ್ನು ನಿಂತಿಕಲ್ಲು ಶಾಖೆಯನ್ನು ತೆರೆಯುವೆಡೆಗೆ ಇಟ್ಟಿರುತ್ತಾರೆ. ಮುಂದುವರೆದು, ಸುಳ್ಯ ಶಾಖೆಯಲ್ಲಿ ಹೆಚ್ಚಿನ ಖರೀದಿಗನುಗುಣವಾಗಿ ಮಾರಾಟ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಯೋಜಿಸಿದ ಉದ್ದೇಶದಂತೆ ಸುಳ್ಯ ಎ.ಪಿ.ಎಂ.ಸಿ ಆವರಣದಲ್ಲಿ ಈಗಾಗಲೇ ಹೆಚ್ಚುವರಿ ಗೋದಾಮುಗಳನ್ನು ಬಾಡಿಗೆ ನಲೆಯಲ್ಲಿ ಪಡಕೊಂಡಿದ್ದು ಶೀಘ್ರದಲ್ಲಿ ಅಡಿಕೆ ಸಂಸ್ಕರಣಾ ಕಾರ್ಯ ಪ್ರಾರಂಭಿಸಲಿದ್ದೇವೆ. ಹೆಚ್ಚಿನ ಶಾಖೆಗಳನ್ನು ಪ್ರಾರಂಭಿಸುವ ಸಲುವಾಗಿ ಅಡಿಕೆ ಖರೀದಿಗೆ ಆರು ಜನ ಅಧಿಕಾರಿಗಳನ್ನು ತರಬೇತಿ ನೀಡುವ ಸಲುವಾಗಿ ಈಗಾಗಲೇ ನೇಮಿಸಿ, ನಾಲ್ಕು ತಿಂಗಳ ತರಬೇತಿಯನ್ನು ಕೇಂದ್ರ ಕಛೇರಿ ಸಂಸ್ಕರಣಾ ಕೇಂದ್ರದಲ್ಲಿ ಪೂರೈಸಿರುತ್ತಾರೆ ಎಂದು ಸೀತಾರಾಮ ರೈ ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಸ್ ಲಿಮಿಟೆಡ್‌ನ ನಿರ್ದೇಶಕರಾದ ನಿತ್ಯಾನಂದ ಮುಂಡೋಡಿ, ರಾಜೀವಿ ಆರ್.ರೈ ಮುಖ್ಯಕಾರ್ಯನಿರ್ವಹಣಾಧಿಕಾರಿ ಟಿ.ಮಹಾಬಲೇಶ್ವರ ಭಟ್, ಮುಖ್ಯ ಮಾರುಕಟ್ಟೆ ಅಧಿಕಾರಿ ಕೆ.ಎಂ.ಲೋಕೇಶ್, ಸುಳ್ಯ ಶಾಖಾ ವ್ಯವಸ್ಥಾಪಕ ಧನಂಜಯ ಮೇರ್ಕಜೆ, ಹಿರಿಯರಾದ ಎಸ್.ಎಂ. ಬಾಪೂ ಸಾಹೇಬ್ ಉಪಸ್ಥಿತರಿದ್ದರು.