ಮಾಸ್‌ನಿಂದ ಅಡಿಕೆ ಬೆಳೆಗಾರರ ಸಂಕಷ್ಟ ದೂರವಾಗಲಿ; ಭಾಗೀರಥಿ ಮುರುಳ್ಯ
ಸುಳ್ಯ, ನ.೨೫: ಅಡಿಕೆ ಬೆಳೆಗಾರರು ಅಡಿಕೆಯಲ್ಲಿನ ವಿವಿಧ ರೀತಿಯ ರೋಗ ಬಾಧೆಗಳ ಜೊತೆಗೆ ವಿವಿಧ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅಡಿಕೆ ಹಾಗೂ ಇನ್ನಿತರ ಕೃಷಿ ಬೆಳೆಗಳಿಗೆ ಉತ್ತಮ ಬೆಲೆ ಸಿಕ್ಕಾಗ ಅವರ ಬದುಕು ಹಸನಾಗುತ್ತದೆ. ಮಾಸ್ ಸಂಸ್ಥೆಯಿAದ ಅಡಿಕೆಗೆ ಉತ್ತಮ ಧಾರಣೆ ನೀಡಿ ಅಡಿಕೆ ಖರೀದಿ ಮಾಡುವ ಮೂಲಕ ಅಡಿಕೆ ಬೆಳೆಗಾರರ ಸಂಕಷ್ಟ ದೂರ ಮಾಡುವ ಕೆಲಸ ಆಗಲಿ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಮಂಗಳೂರು ಕೃಷಿಕರ ಸಹಕಾರಿ ಸಂಘ ನಿಯಮಿತ ಮಂಗಳೂರು (ಮಾಸ್ ಲಿಮಿಟೆಡ್) ವತಿಯಿಂದ ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ನಿಂತಿಕಲ್ಲು ಸಹಯೋಗದಲ್ಲಿ ಸಹಕಾರ ರತ್ನ ಡಾ.ಎಂ.ಎನ್.ರಾಜೇAದ್ರ ಕುಮಾರ್ ಸಹಕಾರದೊಂದಿಗೆ ನಿಂತಿಕಲ್ಲಿನ ಸಾಧನಾ ಸಹಕಾರಿ ಸೌಧದಲ್ಲಿ ಆರಂಭಗೊAಡ ಅಡಿಕೆ ಖರೀದಿ ಕೇಂದ್ರವನ್ನು ಸೋಮವಾರ ಅವರು ಉದ್ಘಾಟಿಸಿ ಮಾತನಾಡಿದರು. ಸಹಕಾರಿ ರಂಗ ಕೃಷಿಕರಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಅದರಂತೆ ಸೀತಾರಾಮ ರೈ ಸವಣೂರು ಅವರು ಎಲ್ಲಾ ರಂಗದಲ್ಲೂ ತನ್ನನ್ನು ತೊಡಗಿಸಿಕೊಂಡು ಸಹಕಾರಿ ರಂಗದ ಮೂಲಕವೂ ಕೃಷಿಕರ ಪರ ಕೆಲಸ ಮಾಡುತ್ತಿದ್ದಾರೆ. ಮಾಸ್ ಸಂಸ್ಥೆಯಿAದ ಕೃಷಿಕರಿಗೆ ಮಾರ್ಗದರ್ಶನ, ತರಬೇತಿ ನೀಡುವ ಕೆಲಸವೂ ನಡೆಯಲಿದೆ ಎಂದ ಅವರು ಮಾಸ್ ಸಂಸ್ಥೆ ರೈತರ ಜೀವಾಳವಾಗಿ ಬೆಳೆಯಲಿ ಇಲ್ಲಿನ ಕೃಷಿಕರು ಇಲ್ಲಿಗೆ ಅಡಿಕೆ ಮಾರಾಟ ಮಾಡಿ ಸಂಸ್ಥೆಗೆ ಪ್ರೋತ್ಸಾಹ ನೀಡಬೇಕು ಎಂದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೋಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸವಣೂರು ಸೀತಾರಾಮ ರೈ ಅವರ ನೇತೃತ್ವದಲ್ಲಿ ಮಾಸ್ ಸಂಸ್ಥೆ ಕ್ಯಾಂಪ್ಕೋ ಸಂಸ್ಥೆಯAತೆ ಅಗಾದವಾಗಿ ಬೆಳೆದು ನಿಂತಿದೆ. ಸೀತಾರಾಮ ರೈ ಅವರ ದೂರದೃಷ್ಟಿ ಯೋಚನೆಯಂತೆ ಮಾಸ್ ಸಂಸ್ಥೆ ಇನ್ನೂ ಉತ್ತಮ ರೀತಿಯಲ್ಲಿ ಬೆಳೆಯಲಿ ಎಂದರು.
ಜನತಾ ಬಜಾರ್ ಮಾಜಿ ಅಧ್ಯಕ್ಷ ಕೆ.ಪ್ರಸನ್ನ ಎಣ್ಮೂರು, ಮುರುಳ್ಯ-ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಕುಸುಮಾವತಿ ರೈ ಕೆ.ಜಿ., ಮುರುಳ್ಯ ಗ್ರಾ.ಪಂ.ಅಧ್ಯಕ್ಷೆ ವನಿತಾ ಸುವರ್ಣ ಬಿ., ಎಡಮಂಗಲ ಗ್ರಾ.ಪಂ. ಉಪಾಧ್ಯಕ್ಷೆ ದಿವ್ಯಾ ಯೋಗಾನಂದ ಉಳ್ಳಲಾಡಿ, ಪ್ರಗತಿಪರ ಕೃಷಿಕ ಪಿ.ರಾಮಚಂದ್ರ ಭಟ್ ದೇವಸ್ಯ, ಮಾಸ್ ಲಿಮಿಟೆಡ್‌ನ ನಿರ್ದೇಶಕರಾದ ನಿತ್ಯಾನಂದ ಮುಂಡೋಡಿ, ರಾಜೀವಿ ಆರ್.ರೈ, ಪಿ.ರಾಜಾರಾಮ ಶೆಟ್ಟಿ, ಮುಖ್ಯ ಮಾರುಕಟ್ಟೆ ಅಽಕಾರಿ ಕೆ.ಎಂ.ಲೋಕೇಶ್, ಸುಳ್ಯ ಶಾಖಾ ವ್ಯವಸ್ಥಾಪಕ ಧನಂಜಯ ಮೇರ್ಕಜೆ ಮತ್ತಿತರರು ಉಪಸ್ಥಿತರಿದ್ದರು. ಮಾಸ್‌ನ ಮುಖ್ಯ ಕಾರ್ಯನಿರ್ವಹಣಾಽಕಾರಿ ಟಿ.ಮಹಾಬಲೇಶ್ವರ ಭಟ್ ವಂದಿಸಿದರು. ಸವಣೂರು ಸೊಸೈಟಿ ಸಿಇಒ ಚಂದ್ರಶೇಖರ್ ಮತ್ತು ಮುರುಳ್ಯ ಎಣ್ಮೂರು ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಽಕಾರಿ ಚಿದಾನಂದ ರೈ ಎನ್. ಕಾರ್ಯಕ್ರಮ ನಿರೂಪಿಸಿದರು.
ಸುಳ್ಯದಲ್ಲಿ ಅಡಿಕೆ ಸಂಸ್ಕರಣಾ ಕೇಂದ್ರ:
ಪ್ರಾಸ್ತಾವಿಕವಾಗಿ ಮಾತನಾಡಿದ ಮಾಸ್ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಅವರು, ಮಾಸ್ ಲಿಮಿಟೆಡ್ ವತಿಯಿಂದ ಸುಳ್ಯದ ಎ.ಪಿ.ಎಂ.ಸಿ. ಯಾರ್ಡ್ನಲ್ಲಿ ಅಡಿಕೆ ಖರೀದಿ ಕೇಂದ್ರ ಕಾರ್ಯಾಚರಿಸುತ್ತಿದೆ. ಇಲ್ಲಿ ಇನ್ನೂ ಎರಡು ಗೋದಾಮು ಪಡೆಯಲು ಪ್ರಯತ್ನ ನಡೆಯುತ್ತಿದೆ. ಗೋದಾಮು ಲಭ್ಯವಾದ ಕೂಡಲೇ ಅಡಿಕೆ ಸಂಸ್ಕರಣಾ ಕೇಂದ್ರ ಆರಂಭಿಸಲಾಗುವುದು. ಸುಳ್ಯ, ಪುತ್ತೂರು, ಕಡಬ ತಾಲೂಕುಗಳಿಂದ ಖರೀದಿ ಮಾಡುವ ಅಡಿಕೆಯನ್ನು ಸುಳ್ಯದಲ್ಲಿ ಸಂಸ್ಕರಿಸಿ ಪ್ಯಾಕ್ ಮಾಡಿ ಉತ್ತರ ಭಾರತಕ್ಕೆ ಕಳುಹಿಸುವ ವ್ಯವಸ್ಥೆ ನಡೆಯಲಿದೆ ಎಂದ ಅವರು ಕೃಷಿಕರ ಅಡಿಕೆಯನ್ನು ಉತ್ತಮ ಬೆಲೆಗೆ ಖರೀದಿಸಿ, ಸಂಸ್ಕರಿಸಿ, ಉತ್ತರ ಭಾರತಕ್ಕೆ ಮಾರಾಟ ಮಾಡುವ ಮೂಲಕ ಅಡಿಕೆ ಬೆಲೆಯಲ್ಲಿ ಸ್ಥಿರತೆ ಮತ್ತು ವರ್ಷವಿಡೀ ಕೃಷಿಕರ ಅಡಿಕೆ ಖರೀದಿಗೆ ಮಾರುಕಟ್ಟೆ ಒದಗಿಸಲು ಇದರಿಂದ ಸಹಕಾರಿಯಾಗಲಿದೆ ಎಂದರು.