ಸುಳ್ಯ ತಾಲೂಕು ಕಚೇರಿಗೆ ವ್ಯದ್ಯಾಪ್ಯವೇತನಕ್ಕೆ ಅರ್ಜಿ ಸಲ್ಲಿಸಲು ಬಂದಿದ್ದ ಅಡ್ಕಾರಿನ ವ್ಯಕ್ತಿಯೊಬ್ಬರು ಸುಳ್ಯ ತಾಲೂಕು ಕಚೇರಿಯ ಪಡಶಾಲೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಗಿದೆ.
ಅಡ್ಕಾರಿನ ರಾಘವ ಆಚಾರ್ಯ (65 ವರ್ಷ) ಎಂಬವರು ವೃದ್ದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಲೆಂದು ಇಂದು ಸುಳ್ಯ ತಾಲೂಕು ಕಚೇರಿಗೆ ಬಂದಿದ್ದರು. ಅರ್ಜಿ ಸ್ವೀಕರಿಸಿದ ಅಲ್ಲಿನ ಸಿಬ್ಬಂದಿ ಒಟಿಪಿ ಬರುವವರೆಗೆ ಕುಳಿತುಕೊಳ್ಳಿ ಎಂದು ಹೇಳೆದ ಮೇರೆಗೆ ಪಡಶಾಲೆಯ ಆವರಣದಲ್ಲಿ ಅವರು ಕುಳಿತಿದ್ದರು. ಸ್ವಲ್ಪ ಹೊತ್ತಲ್ಲಿ ಒಟಿಪಿ ಬಂದಾಗ ರಾಘವ ಆಚಾರ್ಯರನ್ನು ಸಿಬ್ಬಂದಿ ಕೌಂಟರ್ ಬಳಿಗೆ ಕರೆದರು.
ಕುಳಿತಲ್ಲಿಂದ ಎದ್ದು ಕೌಂಟರ್ ಬಳಿಗೆ ಬರುತ್ತಿದ್ದಂತೆ ರಾಘವ ಆಚಾರ್ಯರು ಕುಸಿದು ಬಿದ್ದರು. ತಕ್ಷಣ ಅಲ್ಲಿನ ಸಿಬ್ಬಂದಿ ಅವರ ಮುಖಕ್ಕೆ ನೀರು ಹಾಕಿ ಎತ್ತಿ ಬೆಂಚಲ್ಲಿ ಮಲಗಿಸಿದರು.ಅಷ್ಟರಲ್ಲಿ ಆ್ಯಂಬ್ಯುಲೆನ್ಸ್ ಬರುವಾಗ ಅವರು ಮ್ರತಪಟ್ಟಿದ್ದರು.