ನೆಲ್ಲಿಕಾಯಿಯಲ್ಲಿ ಸಾಕಾಷ್ಟು ಪ್ರಮಾಣದ ವಿಟಮಿನ್ ಇದೆ.ನೆಲ್ಲಿಕಾಯಿ ವಿಟಮಿನ್ ಸಿ ಪ್ರಮಾಣ ಹೊಂದಿದೆ.ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಜೊತೆಗೆ ಸ್ವಲ್ಪ ಬೆಲ್ಲ ಸೇವನೆ ಮಾಡುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನಾರಿನ ಅಂಶ ಹೆಚ್ಚಾಗಿರುವ ನೆಲ್ಲಿಕಾಯಿ ನಮ್ಮ ಜೀರ್ಣಾಂಗ ವ್ಯವಸ್ಥೆಗೆ ಅನುಕೂಲಕರವಾಗಿ ಕೆಲಸ ಮಾಡುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಇದರಿಂದ ಪ್ರತಿದಿನ ಆಹಾರ ಪದ್ಧತಿಯಲ್ಲಿ ಸೇರಿಸಿ ಸೇವಿಸುವುದರಿಂದ ಚರ್ಮದ ಆರೋಗ್ಯ ವೃದ್ಧಿಸುತ್ತದೆ.