17 ವರ್ಷದ ಬಾಲಕಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲ್ಲೂಕಿನ ಮಿತ್ತಬಾಗಿಲು ಎಂಬಲ್ಲಿ ನಡೆದಿದೆ.
ಮದುವೆಯಾಗುತ್ತೇನೆಂದು ನಂಬಿಸಿ ಪ್ರವೀಣ್ ಗೌಡ ಎಂಬಾತ ದೈಹಿಕ ಸಂಪರ್ಕ ಇರಿಸಿಕೊಂಡಿದ್ದ. ನಂತರ ಗರ್ಭ ನಿರೋಧಕ ಮಾತ್ರೆ ನೀಡಿದ್ದ ಎನ್ನಲಾಗಿದೆ.ಈ ವಿಷಯವನ್ನು ಬಾಲಕಿ ಸಾಯುವ ಮುಂಚೆ ತಾಯಿಗೆ ಹೇಳಿದ್ದಾಗಿ ತಿಳಿದು ಬಂದಿದೆ. ನಿನ್ನ ಜತೆ ಇದ್ದು ಬೋರ್ ಆಗಿದೆ, ಬ್ರೇಕಪ್ ಮಾಡೋಣ ಎಂದು ಯುವಕ ಹೇಳಿದ್ದ ಎಂದು ವರದಿ ತಿಳಿಸಿದೆ.