ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನ.30ರ ಶನಿವಾರ ಬೆಳಗ್ಗೆ 8.30 ಗಂಟೆಯಿಂದ 10.30 ಗಂಟೆಯವರೆಗೆ ಸಾರ್ವಜನಿಕರ ಭೇಟಿಗೆ ತಮ್ಮ ಕಚೇರಿಯಲ್ಲಿ ಲಭ್ಯವಿರುತ್ತಾರೆ ಅವರ ಮಂಗಳೂರು ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಾಗರಿಕರು ತಮ್ಮ ಅಹವಾಲುಗಳೊಂದಿಗೆ ಮಂಗಳೂರಿನ ಜಿಲ್ಲಾಧಿಕಾರಿ ಸಂಕೀರ್ಣದಲ್ಲಿರುವ ಸಂಸದರ ಕಚೇರಿಗೆ ಬಂದು ಚೌಟ ಅವರನ್ನು ಖುದ್ದು ಭೇಟಿ ಮಾಡಬಹುದು. ಆ ಮೂಲಕ ಸಾರ್ವಜನಿಕರು ತಮ್ಮ ಕುಂದು-ಕೊರತೆಗಳನ್ನು ಗಮನಕ್ಕೆ ತರಬಹುದಾಗಿದೆ.