ಭಾಷೆಗೆ ಉತ್ತಮವಾದ ರೂಪುರೇಷೆಗಳನ್ನು ನೀಡಿ ಭಾಷೆಯನ್ನು ಉದ್ದೀಪನಗೊಳಿಸಬೇಕು : ಎಂ.ಬಿ ಸದಾಶಿವ

ಭಾಷೆಯಲ್ಲಿ ಸಂಸ್ಕೃತಿ,ವ್ಯಕ್ತಿತ್ವ ಇದೆ.ಭಾಷೆಗೆ ಉತ್ತಮವಾದ ರೂಪುರೇಷೆಗಳನ್ನು ನೀಡಿ ಭಾಷೆಯನ್ನು ಉದ್ದೀಪನಗೊಳಿಸಬೇಕೆಂದು ಲಯನ್ಸ್ ಮಾಜಿ ರಾಜ್ಯಪಾಲ ಎಂ.ಬಿ ಸದಾಶಿವ ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಮಂಡೆಕೋಲು ಗ್ರಾಮ ಗೌಡ ಸಮಿತಿ ಇವರ ಸಹಕಾರದಲ್ಲಿ ಮಂಡೆಕೋಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ‘ಅಮೃತ ಸಭಾಭವನದಲ್ಲಿ’ ನಡೆದ ಅರೆಭಾಷೆ ಗಡಿನಾಡ ಉತ್ಸವ ಸಮಾಪನ ಕಾರ್ಯಕ್ರಮದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಭರತ್ ಮುಂಡೋಡಿ, ದ.ಕ. ಜಿಲ್ಲಾ ಗೌಡ ವಿದ್ಯಾಸಂಘದ ಅಧ್ಯಕ್ಷರಾದ ಧನಂಜಯ ಅಡ್ಪಂಗಾಯ, ಅರೆಭಾಷೆ ಅಕಾಡೆಮಿಯ ಪೂರ್ವಾಧ್ಯಕ್ಷರಾದ ಪಿ.ಸಿ. ಜಯರಾಮ, ಲಕ್ಷ್ಮೀನಾರಾಯಣ ಕಜೆಗದ್ದೆ,ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಅಕಾಡೆಮಿ ಸದಸ್ಯ ಚಂದ್ರಶೇಖರ ಪೇರಾಲ್,ಅಕಾಡೆಮಿ ಸದಸ್ಯರಾದ ಲತಾ ಕುದ್ಪಾಜೆ,ಚಂದ್ರಾವತಿ ಬಡ್ಡಡ್ಕ,
ಸಹಕಾರಿ ಸಂಘದ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಡಾ.ಎನ್.ಎ.ಜ್ಞಾನೇಶ್, ದಿವ್ಯಲತಾ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಅರೆಭಾಷಿಕ ದಂಪತಿ, ಕೃಷಿ ಹಾಗೂ ಹೈನುಗಾರಿಕಾ ಕ್ಷೇತ್ರ ಶಿಕ್ಷಣ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರ ಸಹಕಾರ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅರೆಭಾಷೆ ಸಂಸ್ಕೃತಿನ ಉಳ್ಸಿ,ಸಾಹಿತ್ಯನ ಬೆಳ್ಸುವ ಕಾರ್ಯ ಎಂಬ ವಿಷಯದ ಬಗ್ಗೆ ಡಾ.ವಿಶ್ವನಾಥ ಬದಿಕಾನ ಉಪನ್ಯಾಸ ನೀಡಿದರು.ಕಾರ್ಯಕ್ರಮವನ್ನು ಚಂದ್ರಶೇಖರ ಪೇರಾಲ್ ನಡೆಸಿಕೊಟ್ಟರು.ಅಕಾಡೆಮಿ ಪ್ರಕಟ ಮಾಡಿದ ಪುಸ್ತಕಗಳ ಬಗ್ಗೆ ಅವಲೋಕನ ನಡೆಯಿತು.ಈ‌ ಕಾರ್ಯಕ್ರಮದಲ್ಲಿ ಲೀಲಾ ದಾಮೋದರ,ಸಂಗೀತಾ ರವಿರಾಜ್,ಯೋಗಿಶ್ ಹೊಸೊಳಿಕೆ,ಹೇಮಲತಾ ಗಣೇಶ್ ಕಜೆಗದ್ದೆ ಭಾಗವಹಿಸಿದರು.ಗೋಪಾಲ ಪೆರಾಜೆ ಕಾರ್ಯಕ್ರಮ ನಡೆಸಿಕೊಟ್ಟರು.ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅರೆಭಾಷೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ನೆಹರು ಮೆಮೋರಿಯಲ್ ಕಾಲೇಜು‌ ಸುಳ್ಯ ಇವರಿಂದ ಅರೆಭಾಷೆ ಸಿರಿ ಸಂಸ್ಕೃತಿ ಕಾರ್ಯಕ್ರಮ ಮತ್ರು ಕೆ.ಆರ್ ಗೋಪಾಲಕೃಷ್ಣ ಮತ್ತು ಬಳಗದವರಿಂದ ಅರೆಭಾಷೆ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.ಶುಭಕರ ಬೊಳುಗಲ್ಲು ಕಾರ್ಯಕ್ರಮ ನಡೆಸಿಕೊಟ್ಟರು.

Ad Widget . Ad Widget . Ad Widget . . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top