ನವವಿವಾಹಿತೆ ದಾವಣೆಗೆರೆ ಮೂಲದ ಚೆನ್ನಗಿರಿಯ ಮಂಗಳ ಯಾನೆ ಕಾವ್ಯಾ (28 ವರ್ಷ) ನವಂಬರ್ 20ರಿಂದ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಸುಳ್ಯ ಪೊಲೀಸ್ ಠಾಣೆಯಲ್ಲಿ ಪತಿ ಪತ್ನಿಯನ್ನು ಹುಡುಕಿಕೊಡುವಂತೆ ದೂರು ನೀಡಿದ್ದಾರೆ. ನ.7ರಂದು ಕಾವ್ಯಾ ವಿಕ್ರಂ ಮದುವೆಯಾಗಿದ್ದರು. ನ.20ರಂದು ಈಕೆ ಬ್ಯೂಟಿ ಪಾರ್ಲರ್ ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೊರಟು ಹೋದವರು ಮನೆಗೆ ಬಾರದೆ ತವರು ಮನೆಗೆ ಹೋಗದೆ ನಿಗೂಡವಾಗಿ ನಾಪತ್ತೆಯಾಗಿದ್ದಾರೆ.