( ಕವನ) ಶ್ರೀ ಕೃಷ್ಣ

ದೇವಕಿಯ ಗರ್ಭದಲ್ಲಿ ಬೆಳಕು ಕಂಡ|
ಯಶೋಧೆಯ ಮಡಿಲಲ್ಲಿ ಮಮತೆಯ ಕಂದ||
ಬೆಂಕಿ ಎಂದವರಿಗೆ ಬೆಳಕಾಗಿ ಅರಳಲು ವದನ|
ಸುಶ್ರಾವ್ಯ ಕೋಮಲ ಹೃದಯದ ಕೊಳಲ ವಾದನ ||
ಮಾವ ಕಂಸನೇನೋ ಅತೀ ಕಟುಕನಲ್ಲ|
ಹಾಗಿದ್ದರೆ ತಂಗಿಯ ಪ್ರಾಣ ಉಳಿಸುತ್ತಿರಲಿಲ್ಲ||
ಕೋಪದಿಂದ ಭಯಪಟ್ಟಿದ್ದು ಸಾವಿಗೆ ಮಾತ್ರ|
ನಿನ್ನಿಂದಲೇ ದುಷ್ಟರ ಸಾವಿಗೆ ಸೂತ್ರ||
ರಾಧೆಯ ಹೃದಯದಲ್ಲಿ ಪ್ರೇಮಿಯಾದೆ|
ರುಕ್ಮಿಣಿಯ ಮನಸಲ್ಲಿ ಪ್ರೀತಿಯ ಪತಿಯಾದೆ||
ಜಗದೋಧ್ದಾರಕ ನಿನಗೇ ನಿನ್ನ ಪ್ರೀತಿ ದಕ್ಕಿಲ್ಲ|
ಜಗದಲ್ಲಿರುವ ಮೂಢರಿಗೆ ನಿಜ ಪ್ರೀತಿ ಸಿಕ್ಕಿಲ್ಲ||
ದುಡುಕಿನ ನಿರ್ಧಾರ ತಕ್ಷಣಕ್ಕೆ ಬರುವ ವೈರಾಗ್ಯ ಕ್ಷಣಿಕ| ಅನುಭವಿಸಿ ಜಯಿಸಿದರೆ ಮಾತ್ರ ಮಾಣಿಕ್ಯ ||
ಬಾಳಿ ಬದುಕಬೇಕಾದವರು ಮುದುಡಲು ಕಾರಣ| ಮಾತಾಪಿತೃರು ಕೂಡಿಟ್ಟ ಧನ ಧಾನ್ಯ ಪಾಪಗಳ ಹೂರಣ||
ಹಿಂದಿನ ಜನ್ಮದ ಮರೆವು ಕೊಟ್ಟೆ| ಸಾಧನೆ ಮಾಡಲು ಶರೀರ ಇಟ್ಟೆ||
ದೊಡ್ಡವರನ್ನು ಇಳಿಸಿ ಸಣ್ಣವರನ್ನು ಬೆಳೆಸಿ|
ಜಗತ್ತು ಚಲಿಸಲು ಬಿಟ್ಟೆ||
✍️ಅಕ್ಷತಾ ನಾಗನಕಜೆ

Ad Widget . Ad Widget . Ad Widget . . Ad Widget . . Ad Widget .

. Ad Widget . Ad Widget . Ad Widget

||

Leave a Comment

Your email address will not be published. Required fields are marked *

error: Content is protected !!
Scroll to Top