ಕಾಸರಗೋಡು ತಾಲೂಕಿನ ದೇಲಂಪಾಡಿ ಗ್ರಾಮದ ಗಡಿನಾಡು ಪ್ರದೇಶ ಬೆಳ್ಳಿಪ್ಪಾಡಿಯು, ಸುಳ್ಯ ತಾಲೂಕಿನ ಜಾಲ್ಸೂರು, ಮಂಡೆಕೋಲು ಹಾಗೂ ಕನಕ ಮಜಲು ಈ ಮೂರು ಗ್ರಾಮಗಳಿಂದ ಸುತ್ತುವರಿದ ಗ್ರಾಮೀಣ ಪ್ರದೇಶ.
ಇಲ್ಲಿ ಸುಮಾರು ನೂರು ನೂರೈವತ್ತು ವರ್ಷಗಳ ಹಿಂದಿನ ಇತಿಹಾಸದಿಂದಲೂ ನೆಲೆಸಿರುವಂತಹ ತಾಯಿ ಶ್ರೀ ಉಳ್ಳಾಕುಲು ಧೂಮಾವತಿ ದೈವದ ಕಾಲಾವಧಿ ನೇಮೋತ್ಸವವೂ ವರ್ಷಂಪ್ರತಿ ಡಿಸೆಂಬರ್ ತಿಂಗಳ 6 ಮತ್ತು 7 ರಂದು ಶ್ರದ್ಧೆ ಭಕ್ತಿ ಸಡಗರದಿಂದ ನಡೆಯುತ್ತದೆ.
ವಿಶೇಷತೆ:
ವಿಶೇಷವೆಂದರೆ ತುಳು ನಾಡಿನ ತುಳು ತಿಂಗಳ ಬೇಸ ಪತ್ತನಾಜೆ ಕಳೆದ ಮೇಲೆ ಸಾಮಾನ್ಯವಾಗಿ ಎಲ್ಲಿಯೂ ಕೂಡ ದೈವದ ನೇಮೋತ್ಸವ ನಡೆಯುವುದಿಲ್ಲ,( ಹರಕೆ ನೇಮೋತ್ಸವ ಬಿಟ್ಟು ) ಹೀಗೆ ತಟಸ್ಥವಾಗಿರುವ ನೇಮೋತ್ಸವ ಬೆಳ್ಳಿಪ್ಪಾಡಿಯ ಶ್ರೀ ಉಳ್ಳಾಕುಲು ಧೂಮಾವತಿ ನೇಮೋತ್ಸವದ ನಂತರ ಎಲ್ಲೆಡೆಯೋ ಪ್ರಾರಂಭವಾಗುವುದು. ಇಂತಹ ಬೆಳ್ಳಿಪ್ಪಾಡಿ ದೈವದ ವಿಶೇಷತೆಯು, ಬೆಳ್ಳಿ ಪಾಡಿಯ ಜನತೆಗೂ ಕೂಡ ಒಂದು ರೀತಿಯ ಹೆಗ್ಗಳಿಕೆ ಎಂದರೆ ತಪ್ಪಾಗಲಾರದು.
ಸಂತಾನ ಭಾಗ್ಯ ದೊರಕಿಸುವ ಅಮ್ಮ :
ಸಂತಾನ ಭಾಗ್ಯದಿಂದ ವಂಚಿತಳಾಗಿರುವ ಸ್ತ್ರೀಯರು
ನೇಮೋತ್ಸವದ ದಿನ ಮಡಿಯುಟ್ಟು ದೈವದ ಮುಂದೆ ಕೈಮುಗಿದು ಭಕ್ತಿಯಿಂದ ಬೇಡಿಕೊಂಡರೆ ತಾಯಿ ಧೂಮಾವತಿಯು ಪ್ರಸಾದ ರೂಪವಾಗಿ ನೀಡುವ ಸೀಯಾಳವನ್ನು ಸಮರ್ಪಣ ಭಾವದಿಂದ ಸೇವಿಸಿದರೆ, ಮುಂದಿನ ವರ್ಷದ ನೇಮೋತ್ಸವ ಸಂದರ್ಭದಲ್ಲಿ ಅಂತಹ ಸ್ತ್ರೀಯರು ತನ್ನ ಕಂದಮ್ಮನೊಂದಿಗೆ ಇಲ್ಲವೇ ಗರ್ಭಿಣಿಯಾಗಿ ಪುನಃ ದೈವದ ಅನುಗ್ರಹಕ್ಕಾಗಿ ಅಮ್ಮನ ಸಾನಿಧ್ಯಕ್ಕೆ ಬರುತ್ತಾರೆ.
ಶ್ರೀ ಉಳ್ಳಾಕುಲು ಧೂಮಾವತಿ ದೈವಸ್ಥಾನ ಬೆಳ್ಳಿಪ್ಪಾಡಿ
ಬೆಳ್ಳಿಪ್ಪಾಡಿ -ಡಿಸೆಂಬರ್ 6 ಮತ್ತು 7 ರಂದು ಕಾಲಾವಧಿ ನೇಮೋತ್ಸವ ದಿನಾಂಕ 6-ರಂದು ರಾತ್ರಿ 8 ಗಂಟೆಗೆ ದೈವಗಳ ಭಂಡಾರ ತೆಗೆಯುವುದು ಭಜನಾ ಕಾರ್ಯಕ್ರಮ, ಅನ್ನ ಸಂತರ್ಪಣೆ ದಿನಾಂಕ 7-ರಂದು ಪ್ರಾತಃಕಾಲ 6:00 ಗಂಟೆಗೆ ಶ್ರೀ ಉಳ್ಳಾಕುಲು ದೈವದ ನೇಮ ಗಂಟೆ 10-00ರಿಂದ ಶ್ರೀ ಧೂಮಾವತಿ ದೈವದ ನೇಮ, ಪ್ರಸಾದ ವಿತರಣೆ ಅನ್ನ ಸಂತರ್ಪಣೆ ನಡೆಯಲಿದೆ.ಭಗವದ್ಭಕ್ತರು ಆಗಮಿಸಿ ದೈವದ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ,
ಎಲ್ಲರಿಗೂ ಆದರದ ಸ್ವಾಗತ ಬಯಸುವ
ನಾಲ್ಕು ವರ್ಗ, ಹದಿನಾರು ಬೆಳ್ಳಿಪ್ಪಾಡಿ
✍️: ಶ್ವೇತಾ ರಮೇಶ್ ಬೆಳ್ಳಿಪ್ಪಾಡಿ