ನಮ್ಮ ಜೀವನದಲ್ಲಿ ಅನೇಕ ವ್ಯಕ್ತಿಗಳು ಬಂದು ಹೋಗುತ್ತಾರೆ. ಅಂತಹದರಲ್ಲಿ ಪ್ರಾಣಿಗಳ ನೆನಪು ಮನಸ್ಸಿನಲ್ಲಿ ಆಳವಾಗಿ ಬೇರೂರುತ್ತದೆ. ನಂಬಿದವರು ಕೈಯನ್ನು ಬಿಡಬಹುದು ಆದರೆ ಪ್ರಾಣಿಗಳ ಮೇಲೆ ನಂಬಿಕೆ ಇಟ್ಟರೆ ಅವು ಮೋಸ ಮಾಡಲಾರರು. ಏಕೆಂದರೆ ಮನುಷ್ಯನಂತೆ ಬಣ್ಣ ಬಣ್ಣದ ಮಾತಿನಲ್ಲಿ ದ್ರೋಹ ಬಗೆಯುವುದಿಲ್ಲ. ನಾವು ಅವರೊಂದಿಗೆ ಹೇಗೆ ವರ್ತಿಸುತ್ತೇವೆಯೋ ಹಾಗೆ ನಮ್ಮ ಜೊತೆಗೆ ವರ್ತಿಸಲು ಬಯಸುತ್ತೇವೆ. ನಮ್ಮಂತೆ ಆಗದಿದ್ದರೂ ಅವರ ಗುಣ ನಡತೆಯಲ್ಲಿ ತೋರುವ ಪ್ರೀತಿ ಮಾತನಾಡುತ್ತದೆ. ಹೆಚ್ಚಿನ ಜನರು ತಮ್ಮ ಮನೆಯಲ್ಲಿ ಬೆಕ್ಕನ್ನು ಸಾಕಲು ಬಯಸುತ್ತಾರೆ. ಈ ಬೆಕ್ಕುಗಳ ಪ್ರೀತಿ ಎಷ್ಟು ಚಂದ. ದಿನನಿತ್ಯ ನಮ್ಮನ್ನು ಹಿಂಬಾಲಿಸಿ ಬರುವಾಗ ಕೂಗುವ ಶಬ್ದ ಕೇಳುವಾಗ ಮನಸ್ಸಿಗೆ ಅದೇನೋ ಒಂದು ರೀತಿಯಲ್ಲಿ ಖುಷಿ ಸಿಗುತ್ತದೆ. ಕೆಲವೊಮ್ಮೆ ನಮ್ಮ ಜೊತೆಗೆ ಅವುಗಳು ಆಟವಾಡಲು ಬರುತ್ತವೆ, ಮತ್ತು ನಮ್ಮ ಜೊತೆಗೆ ಆಟವಾಡಲು ಬಯಸುತ್ತವೆ. ಪ್ರಾಣಿಗಳಿಗೆ ನಮ್ಮ ಮನಸ್ಸಿನಲ್ಲಿದ್ದ ನೋವುಗಳನ್ನು ದೂರ ಮಾಡುವ ಶಕ್ತಿ ಇದೆ. ನಮ್ಮ ಪೂರ್ವಜರು ಒಂದು ಮಾತು ಹೇಳಿದರು, ಬೆಕ್ಕಿಗೆ ಕಣ್ಣು ಶುದ್ಧ ನಾಯಿಗೆ ಕಿವಿ ಶುದ್ಧವೆಂದು. ಅದು ನಿಜವಾಗಿದೆ. ದೂರದಲ್ಲಿರುವ ಪಕ್ಷಿ ಕೀಟ ಕಂಡರೆ ಅದನ್ನು ಅಲ್ಲಿಯೇ ಕುಳಿತು ನೋಡಿ ಹಿಡಿಯುತ್ತದೆ. ಹಾಗೆ ನಾಯಿಗಳಿಗೆ ದೂರದಲ್ಲಿ ಏನಾದರೂ ಸಣ್ಣದಾಗಿ ಶಬ್ದ ಆದರೆ ಕಿವಿಗೆ ದೊಡ್ಡದಾಗಿ ಕೇಳುತ್ತದೆ. ಬೆಕ್ಕು ಮತ್ತು ಹುಲಿ ಇವುಗಳೆಲ್ಲ ಒಂದೇ ವರ್ಗಕ್ಕೆ ಸೇರಿದಂತಹ ಪ್ರಾಣಿಗಳು. ಅದರಲ್ಲಿ ಬೆಕ್ಕು ಸಾಕುಪ್ರಾಣಿಯಾಗಿ ಮಾರ್ಪಟ್ಟಿದೆ. ಕೆಲವರಿಗೆ ಬೆಕ್ಕು ಕಚ್ಚಿದರೆ ಅಥವಾ ಪರಚಿದರೆ ಅಲರ್ಜಿಯಾಗುತ್ತವೆ. ಇಂತಹ ಕಾರಣಕ್ಕೆ ಬೆಕ್ಕನ್ನು ಸಾಕಲು ಬಯಸುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಮಳೆಗಾಲದ ಸಂದರ್ಭದಲ್ಲಿ ಕಳ್ಳ ಮನಸ್ಸಿನ ಕೆಲವು ಈ ಬೆಕ್ಕುಗಳು ಸಹ ಬೀದಿಗೆ ಬೀಳುತ್ತವೆ. ಅವು ಆಹಾರ ನೀರಿಗಾಗಿ ಒಂದು ಮನೆಯಿಂದ ಮತ್ತೊಂದು ಮನೆಗೆ ಅಲೆಯುತ್ತಿರುತ್ತವೆ. ಕೆಲವು ಮನೆಗಳಲ್ಲಿ ಸಾಕಿದ ಬೆಕ್ಕಿನ ಮರಿಗಳನ್ನು ಕೆಲವು ಪೋಷಕರು ತಮ್ಮ ಮಕ್ಕಳಂತೆ ಅರೈಕೆ ಮಾಡುತ್ತಾರೆ. ದಯಾಮಯಿಗಳಾದ ಕೆಲವರು ಬೀದಿಯಲ್ಲಿ ಬಿಟ್ಟಂತಹ ಬೆಕ್ಕಿನ ಮರಿಗಳನ್ನು ಅಥವಾ ತಮ್ಮ ಮನೆಗೆ ವಲಸೆ ಬಂದಂತಹ ಬೆಕ್ಕಿನ ಮರಿಗಳನ್ನು ಪ್ರೀತಿಯಿಂದ ಆಹಾರ ನೀಡಿ ಸಾಕಿ ಸಲಹುತ್ತಾರೆ. ಪ್ರಾಣಿಗಳೇ ಗುಣದಲಿ ಮೇಲು ಎಂಬುವುದು ಅವುಗಳ ಹಾವ ಭಾವಗಳಲ್ಲಿಯೇ ತಿಳಿಯುತ್ತದೆ. ಮನುಷ್ಯರು ಇಂತಹ ಮೂಕ ಪ್ರಾಣಿಗಳಿಂದ ಕಲಿತುಕೊಳ್ಳುವುದು ಅಪಾರವಾದುದು ಇವೆ.
ದೀಪಿಕಾ.ದೋಳ
ಪತ್ರಿಕೋದ್ಯಮ ಪದವಿ ಪ್ರಥಮ ವರ್ಷದ ವಿದ್ಯಾರ್ಥಿನಿ ವಿವೇಕಾನಂದ ಕಾಲೇಜು ಪುತ್ತೂರು