ರಾಜ್ಯದ ಮಾಜಿ ಸ್ಪೀಕರ್, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಗಳು, ಕೇಂದ್ರದ ಮಾಜಿ ಸಚಿವರಾಗಿ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಎಸ್.ಎಂ ಕೃಷ್ಣರವರ ನಿಧನವು ಅತೀವ ದುಃಖವನ್ನುಂಟು ಮಾಡಿದೆ. ಅವರ ನಿಧನದಿಂದ ಓರ್ವ ರಾಜಕೀಯ ಮತ್ಸದ್ಧಿಯನ್ನು ಕಳೆದುಕೊಂಡಿದೆ ಎಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ ಶಹೀದ್ ತೆಕ್ಕಿಲ್ ಸಂತಾಪ ವ್ಯಕ್ತಪಡಿಸಿರುತ್ತಾರೆ.
1994 ರಲ್ಲಿ ರಾಜ್ಯ ಸಭಾ ಸದಸ್ಯರಾಗಿದ್ದಾಗ ಎಸ್.ಎಂ ಕೃಷ್ಣರವರ ಪರಿಚಯವಾಗಿ ಅವರೊಂದಿಗಿನ ಸಂಬಂಧ ಕೊನೆ ತನಕ ಇತ್ತು. ನನ್ನನ್ನು ಮಗನಂತೆ ನೋಡಿಕೊಂಡಿದ್ದರು ಮತ್ತು ರಾಜಕೀಯವಾಗಿ ಬೆಳೆಸಿದ್ದರು. ಕರ್ನಾಟಕ ಸರಕಾರದ ರಾಜ್ಯವಕ್ಪ್ ಕೌನ್ಸಿಲ್ ನ ಸದಸ್ಯರಾಗಿ, ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ನಿರ್ದೇಶಕರನ್ನಾಗಿ, ಭಾರತ ಸರಕಾರದ ಕೊಯರ್ ಬೋರ್ಡ್ ಸದಸ್ಯರನ್ನಾಗಿ ನೇಮಿಸಿದ್ದರು. ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದಾಗ ರಾಜ್ಯಭವನದಲ್ಲಿ ಉಳುಕೊಳ್ಳುವ ಅವಕಾಶವನ್ನು ನನಗೆ ಕಲ್ಪಿಸಿಕೊಟ್ಟಿದ್ದರು, ಮುಖ್ಯಮಂತ್ರಿಯಾಗಿದ್ದಾಗ ಅರಂತೋಡಿನ ನನ್ನ ಮನೆಗೆ, ಕಾಸರಗೋಡಿನಲ್ಲಿರುವ ನನ್ನ ಪತ್ನಿ ಮನೆಗೆ ಮತ್ತು ಕ್ಯಾಲಿಕಟ್ ನಲ್ಲಿರುವ ನನ್ನ ಕುಟುಂಬಸ್ಥರ ಮನೆಗೆ ಭೇಟಿ ನೀಡಿದ್ದರು. ಕೇಂದ್ರದ ವಿದೇಶಾಂಗ ಸಚಿವರಾಗಿದ್ದ ಸಂಧರ್ಭದಲ್ಲಿ ಕರ್ನಾಟಕದಿಂದ ಸುಮಾರು 300 ಮಂದಿ ಹಜ್ ಯಾತ್ರಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದರು,ಅರಂತೋಡು ಜುಮಾ ಮಸೀದಿಯ ಖತೀಬರಾಗಿದ್ದ ಡಾಕ್ಟರ್ ಶಾಹ್ ಮುಸ್ಲಿಯಾರ್ ರವರ ಹಜ್ ಯಾತ್ರೆಗೆ ಪಾಸ್ ಪೋರ್ಟ್ ಗಾಗಿ ಅರ್ಜಿ ಸಲ್ಲಿಸಿದ್ದಾಗ ಕೇವಲ 12 ಗಂಟೆಗಳಲ್ಲಿ ಬೆಂಗಳೂರಿನ ಪಾಸ್ ಪೋರ್ಟ್ ಕಛೇರಿಯಿಂದ ಪಾಸ್ ಪೋರ್ಟ್ ಸಿಗಲು ಕಾರಣಕರ್ತರಾಗಿದ್ದರು. 1994 ರಲ್ಲಿ ಅರಂತೋಡು ಮತ್ತು ಸಂಪಾಜೆ ಗ್ರಾಮದ ಕೆಲವು ಮನೆಗಳಿಗೆ ಗ್ಯಾಸ್ ಸಂಪರ್ಕ, ದೂರವಾಣಿ ಸಂಪರ್ಕವನ್ನು ಒದಗಿಸಿಕೊಟ್ಟಿರುವುದಲ್ಲದೆ. ಗ್ರಾಮೀಣ ರಸ್ತೆಗಳು, ಶಾದಿಮಹಲ್, ರಂಗಮಂದಿರ, ಸಂಘ ಸಂಸ್ಥೆಗಳಿಗೆ ಹಾಗೂ ಮಸೀದಿ, ಮದರಸ ಅಭಿವೃದ್ಧಿ ಕಾಮಗಾರಿಗಳಿಗೆ ವಕ್ಪ್ ನ್ನಿಂದ ದಾಖಲೆ ಮೊತ್ತದ ಅನುದಾನವನ್ನು ಒದಗಿಸಿ ಕೊಟ್ಟಿರುತ್ತಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ್ದರು. ಸುಳ್ಯದ ಅಗ್ನಿಶಾಮಕ ದಳ ಸ್ಥಾಪನೆ, ಬಸ್ಸ್ ಡಿಪೋ, ಅರಂತೋಡು ಪಾಥಮಿಕ ಆರೋಗ್ಯ ಕೇಂದ್ರದ ಸ್ಥಾಪನೆಗೆ ಕಾರಣಕರ್ತರಾಗಿದ್ದರು.
ಇವರ ನಿಧನದಿಂದ ದೇಶಕ್ಕೆ, ರಾಜ್ಯಕ್ಕೆ, ವೈಯುಕ್ತಿಕವಾಗಿ ನನಗೆ ಮತ್ತು ನನ್ನ ಕುಟುಂಬಸ್ಥರಿಗೆ ತುಂಬಲಾರದ ನಷ್ಟವಾಗಿದೆ. ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪಾರ್ಥಿಸುತ್ತೇನೆ. ಮತ್ತು ಅವರ ಕುಟುಂಬದವರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತನು ನೀಡಲಿ ಎಂದು ಪ್ರಾಥಿಸುತ್ತೇನೆ ಎಂದು ಟಿ.ಎಂ ಶಹೀದ್ ತೆಕ್ಕಿಲ್ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ