ಚೆಂಬು ಗ್ರಾಮದ ಗುಂಡಿಮಜಲು ಗಣಪಯ್ಯ ಜಿ.ವಿ.ಯವರು ಮಂಗಳವಾರ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 65 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಲಕ್ಷ್ಮಿ, ಪುತ್ರ ಚಿಂತನ್, ಪುತ್ರಿ ಅನಿತಾ, ಅಳಿಯ, ಸಹೋದರರು, ಸಹೋದರಿಯರು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಗಣಪಯ್ಯರವರು ಚೆಂಬು ಗ್ರಾಮ ಪಂಚಾಯತಿನ ಮಾಜಿ ಸದಸ್ಯರಾಗಿ, ಊರು ಗೌಡರಾಗಿ, ಚೆಂಬು ಕಿನುಮಾಣಿ ದೈವಸ್ಥಾನದ ಕಾರ್ಯದರ್ಶಿ ಹಾಗೂ ಉಗ್ರಾಣ ಮುಖ್ಯಸ್ಥರಾಗಿ, ಜೈ ಹಿಂದ್ ಯುವಕ ಮಂಡಲದ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು