ಅಮ್ಮ ನಮ್ಮ ಜೀವಕ್ಕೆ ಉಸಿರು ಕೊಟ್ಟ ದೇವತೆ……ಅಮ್ಮ ಎಂದರೆ ಏನೋ ಹರುಷವು
ಎಂಬ ಹಾಡನ್ನು ಕೇಳಿದ್ದೀರಾ?
ಆದರೆ ಅಮ್ಮ ಎನ್ನುವ ಪದಗಳು ಎಲ್ಲಿಂದ ಆರಂಭವಾಯ್ತು……….?
ಮಗುವಿಗೆ ಚಂದಮಾಮಾನ್ನು ತೋರಿಸಿ ಊಟ ಮಾಡಿಸುತ್ತಿದ್ದ ತಾಯಿಯು ಈಗ ಹೊತ್ತೊತ್ತಿಗೆ ಊಟ ಮಾಡುವುದ್ದನ್ನು ಮರೆತು ಹೋಗಿದ್ದಾಳೆ. ತಾಯಿ ಎಷ್ಟೇ ಕಷ್ಟ ಪಟ್ಟರು ಆ ಕಷ್ಟವು ಮಗುವಿಗೆ ಬರಬಾರದೆಂದು ದೇವರಲ್ಲಿ ಬೇಡಿಕೊಳ್ಳುತ್ತಾಳೆ. ಮಗುವಿನ ಹುಟ್ಟಿದ ದಿವಸ ಬಂದರೆ ತಾಯಿ ಹೊಸ ಬಟ್ಟೆ ತೆಗೆದುಕೊಟ್ಟು, ತಾಯಿ ಹರಿದ ಬಟ್ಟೆ ಹಾಕಿಕೊಂಡು, ತನ್ನ ಮಗುವಿನ ಸಂತೋಷವನ್ನು ನೋಡಿ ಖುಷಿ ಪಡುತ್ತಾಳೆ. ಅಮ್ಮ ನನ್ನ ಬಾಳಿನ ಬೆಳಕು ಮತ್ತು ದೇವರು
ಅಮ್ಮನಲ್ಲಿ ವಿಶೇಷವಾದ ಗುಣಗಳಿವೆ. ನಮಗೆ ಒಂದು ಹೋಟೆಲ್ ಇದೆ.ಅದು ಸಿಂಚನ ಹೋಟೆಲ್. ಒಂದು ದಿವಸ ನಾನು ನನ್ನ ತಾಯಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಾ ಇರುವಾಗ, ರೋಡ್ ಲ್ಲಿ ಮಗುವನ್ನು ಸೊಂಟದಲ್ಲಿ ಇರಿಸಿಕೊಂಡು, “ಪೆನ್ನು ಮತ್ತು ಪೆನ್ಸಿಲ್ ” ಇನ್ನಿತರ ವಸ್ತುಗಳನ್ನು ಮಾರುವವರು ಇದ್ದರು. ಅವರನ್ನು ನೋಡಿ ನನಗೆ ಭಯವಾಗುತ್ತಿತ್ತು. ನಾನು ಓಡಿ ಹೋಗಿ ಅಡಗಿಕೊಂಡೆ. ನನ್ನಮ್ಮ ಬಿಸಿಲಲ್ಲಿ ಬಳಲಿ ಹಸಿವು ಅಂತ ಬಂದವರಿಗೆ ಊಟ, ನೀರು ಕೊಟ್ಟು ಪುಣ್ಯ ಪಡೆದುಕೊಳ್ಳುತ್ತಿದ್ದಳು… ನನ್ನ ಅಪ್ಪ ಅಮ್ಮನಿಗೆ ಬೈತಿದ್ರು ಯಾಕೆ ಅವ್ರಿಗೆ ಕೊಡುವುದು ಅವ್ರು ಕದಿತಾರೆ ಉಪ್ಪದ್ರ ಮಾಡುತ್ತಾರೆ ಎಂದು, ಆವಾಗ ನನ್ನ ಅಮ್ಮ ಅವ್ರು ನಮ್ಮ ಹಾಗೆ ಜೀವನ ಮಾಡ್ತಾ ಇದ್ದಾರೆ. ದೇವ್ರು ಕೊಟ್ಟ ಹಣೆಬರಹ ಎಂದು ಸುಮ್ನೆ ಆಗಿ ಬಿಡುತ್ತಾಳೆ.
ಅವಳೇ ನಮ್ಮ ಬಾಳಿನ ದೇವತೆ. ಕಣ್ಣಿಗೆ ಕಾಣುವ ದೇವರು ಅಮ್ಮ.
ಅಮ್ಮ ಎಷ್ಟೇ ಬೈದರು ಹೊಡೆದರು ಅಮ್ಮನ ಮೇಲೆ ಕೋಪ ಮಾಡಿಕೊಳ್ಳಬಾರದು.
ಅಮ್ಮ ನನ್ನ ಕಷ್ಟ ನನ್ನ ಮಕ್ಕಳಿಗೆ ಬರಬಾರದೆಂದು ಪ್ರತಿ ಕ್ಷಣ ಆಲೋಚಿಸುತ್ತಿರುತ್ತಾಳೆ.
ಕಾಲೇಜ್ ಬಿಟ್ಟು ಮನೆಗೆ ಬರುವ ತನಕ ಅಮ್ಮ ಊಟ ತಿಂಡಿ ತಿನ್ನದೆ ಮನೆ ಬಾಗಿಲ ಹತ್ರ ಕುಳಿತುಕೊಂಡು ಕಾಯ್ತಿರುತ್ತಾಳೆ..
ಎಷ್ಟೇ ಕಷ್ಟ ಆದ್ರೂ ಅಮ್ಮನಲ್ಲಿ ಸಮಸ್ಯೆ ಹೇಳಿದ್ರೆ ಎಲ್ಲ ಕಷ್ಟವನ್ನು ಪರಿಹಾರ ಮಾಡುವ ದೇವತೆ ಅಮ್ಮ.
ತಾಯಿ ನಮಗೆ ಭೂಮಿಯ ಮೇಲೆ ಜೀವ ನೀಡಿದ ದೇವರ ಮತ್ತೊಂದು ರೂಪ. ಆ ಅಮೂಲ್ಯ ಜೀವನದ ಋಣ ವನ್ನು ನಾವು ಎಂದಿಗೂ ತೀರಿಸಲು ಸಾಧ್ಯವೇ ಇಲ್ಲಾ?
ನಮ್ಮ ತಾಯಂದಿರಿಗೆ ಸಾಧ್ಯವಾದಷ್ಟು ನೋವಗದ ರೀತಿ ನೋಡಿಕೊಳ್ಳೋಣ.
✍️ ಸಹನಾ
ಸಹನಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲು
ಸುಳ್ಯ