ಪಾಲದಿಂದ ಆಕಸ್ಮೀಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡ ವ್ಯಕ್ತಿಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಪೆರಾಜೆ ಗ್ರಾಮದ ವ್ಯಾಪಾರೆಯಲ್ಲಿ ಗುರುವಾರ ರಾತ್ರಿ ವರದಿಯಾಗಿದೆ.
ವ್ಯಾಪಾರೆಯ ಕುಸುಮಾಧರ(40 )ಎಂಬವರು ರಾತ್ರಿ ಮನೆಗೆ ಬರುತ್ತಿದ್ದ ವೇಳೆ ತೋಟದಲ್ಲಿದ್ದ ಪಾಲದಿಂದ ಕೆಳಗೆ ಬಿದ್ದರು.ಅವರ ತಲೆ ಸೇತುವೆಯ ಕೆಳಭಾಗದಲ್ಲಿದ್ದ ಕಲ್ಲಿಗೆ ಬಡಿದ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡು, ಸ್ಥಳದಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.