ಪೆರಾಜೆ ಗ್ರಾಮದಲ್ಲಿ ಬೇಟೆಗಾರರೊಬ್ಬರು ಕಾಡು ಪ್ರಾಣಿ ಎಂದು ತಿಳಿದು ಸಾಕು ನಾಯಿಯೊಂದಕ್ಕೆಕೋವಿಯಿಂದ ಗುಂಡು ಹಾರಿಸಿ ಸಾಕು ನಾಯಿ ಗುಂಡೇಟಿಗೆ ಬಲಿಯಾದ ಘಟನೆ ಶನಿವಾರ ವರದಿಯಾಗಿದೆ.
ರಾತ್ರಿ ಕಾಪುಮಲೆ ಕುಂದಲ್ಪಾಡಿ ದಯಾಕರ ಅವರ ಮನೆಯ ಬಳಿ ಬೇಟೆಗೆ ಬಂದ ವ್ಯಕ್ತಿ ಅವದ ಸಾಕು ನಾಯಿಗೆ ರಾತ್ರಿ 11 30 ಕ್ಕೆ ಗುಂಡು ಹೊಡೆದು ಪರಾರಿಯಾಗಿದ್ದಾರೆ.
ಸಾಕು ನಾಯಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ.ಇದರಿಂದ ಮನೆಯವರು ಆಕ್ರೋಶಗೊಂಡಿದ್ದಾರೆ.