ಪುರಾಣ ಪ್ರಸಿದ್ದ ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಡಿ.16ರಿಂದ ಧನು ಪೂಜೆ ಆರಂಭಗೊಳ್ಳಲಿದೆ.ಜೀರ್ಣೋದ್ಧಾರ ಕಾಮಗಾರಿಗಳು ಯಶಸ್ವಿಯಾಗಿ ಪೂರೈಸಿದ್ದು, ಕಳೆದ 2017ರ ಮಾರ್ಚ್ 1ರಿಂದ 11ರ ತನಕ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ಜರುಗಿದೆ. ಶ್ರೀ ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗೆ ಪೂರಕವಾಗಿ ಶ್ರೀ ದೇವಳದಲ್ಲಿ ಈ ಹಿಂದೆ ನಡೆಯುತ್ತಿದ್ದ ಕೆಲವೊಂದು ಪೂಜಾ ವಿಧಿವಿಧಾನಗಳು ನಿಂತಿರುವ ಬಗ್ಗೆ ತಿಳಿದುಕೊಂಡು ಅವುಗಳ ಪೈಕಿ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿದ್ದ ‘ಧನುಪೂಜೆ”ಯನ್ನು ಕಳೆದ ಹದಿಮೂರು ವರ್ಷಗಳಿಂದ ಯಶಸ್ವಿಯಾಗಿ ನೆರವೇರಿಸಿಕೊಂಡು ಬರಲಾಗುತ್ತಿದೆ.ಶ್ರೀ ಮಲ್ಲಿಕಾರ್ಜುನ ದೇವರ ಅನುಗ್ರಹದಿಂದ ವರ್ಷದಿಂದ ವರ್ಷಕ್ಕೆ ಈ ಧನುಪೂಜೆಯಲ್ಲಿ ಪಾಲ್ಗೊಳ್ಳುವ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗಿದೆ.ಶ್ರೀ ಕ್ಷೇತ್ರ ತೊಡಿಕಾನದಲ್ಲಿ ನೂರಾರು ವರ್ಷಗಳ ಹಿಂದಿನ ದಾಖಲೆಗಳ ಪ್ರಕಾರ ಧನುಮಾಸದಲ್ಲಿ ಧನುಪೂಜೆಗಳು ನಡೆದ ಬಗ್ಗೆ ಮಾಹಿತಿ ಇದೆ. ಆ ಪ್ರಕಾರ ಈ ವರ್ಷದ ಡಿಸೆಂಬರ್ ತಿಂಗಳ 16ರಿಂದ, 2025 ಜನವರಿ 14ರವರೆಗೆ ಈ ವಿಶೇಷ ಧನುಪೂಜೆ ನಡೆಯಲಿದೆ. ಸುಳ್ಯ ಸೀಮೆಗೆ ಸಂಬಂಧಪಟ್ಟ ಎಲ್ಲಾ ಭಕ್ತಾಧಿಗಳು ಈ ವಿಶೇಷ ಪೂಜೆಯಲ್ಲಿ ಭಾಗಿಗಳಾಗಿ ದೇವರ ಸಂತೃಪ್ತಿ ಹಾಗೂ ಭಕ್ತ ಜನರ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವಂತೆ ವಿನಂತಿಸಿಕೊಳ್ಳಲಾಗಿದೆ. ಈ .ಧನುಮಾಸದ ದಿವಸದಲ್ಲಿ ವಿಶೇಷವಾಗಿ ಧನುಪೂಜೆ ಮಾಡಿಸುವವರು ರೂ. 500-00 ತೆತ್ತು ತಮಗೆ ಬೇಕಾದ ದಿವಸವನ್ನು ಮುಂಚಿತವಾಗಿ ದೇವಳದ ಕಛೇರಿ ಸಮಯದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕುಟುಂಬ ಸಮೇತರಾಗಿ ಪೂಜೆಯಲ್ಲಿ ಹಾಜರಿರರಬೇಕು. ಧನುಪೂಜೆಯಲ್ಲಿ ಭಾಗಿಗಳಾಗುವವರು ಕುಟುಂಬ ಸಮೇತರಾಗಿ ಶುಚಿರ್ಭೂತರಾಗಿ ಮುಂಜಾನೆ 4-45 ಗಂಟೆ ಮೊದಲೇ ಹಾಜರಿರಬೇಕು. ಶ್ರೀ ದೇವಳದಲ್ಲಿ ಮಾಮೂಲಿನಂತೆ ಜರಗುವ ಎಲ್ಲಾ ಸೇವೆಗಳೂ ನಡೆಯುವುದಲ್ಲದೆ ಧನುಪೂಜೆ ಪೂರ್ವಾಹ್ನ 5-00 ಗಂಟೆಗೆ ಜರಗುವುದು.ಪ್ರತಿ ದಿನ ಧನುಪೂಜೆಯ ಬಳಿಕ ದೇವಳದಲ್ಲಿ ಲಘು ಉಪಾಹಾರದ ವ್ಯವಸ್ಥೆ ಇದೆ.ಧನುಪೂಜೆಯ ಎಲ್ಲಾ ದಿನಗಳಲ್ಲಿ ಸೀಮೆಯ ಭಜನಾ ತಂಡಗಳಿಂದ ಪೂರ್ವಾಹ್ನ ಗಂಟೆ 4-00ಕ್ಕೆ ಭಜನಾ ಸೇವೆ ಜರುಗುವುದುಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಸೇವೆ ಮಾಡಲು ಇಚ್ಚಿಸುವ ಭಕ್ತಾಧಿಗಳು ಶ್ರೀ ದೇವಳದ ಕಛೇರಿಯನ್ನು ಸಂಪರ್ಕಿಸಬಹುದು.