ಕೃತಕ ಗರ್ಭಧಾರಣೆ ಮಾಡಿಸಿಕೊಂಡ ಕಡಬ ತಾಲೂಕಿನ ಎಡಮಂಗಲ ಗ್ರಾಮದ ಡೆಕ್ಕಳ ದಿನೇಶ್ ಎಂಬವರ ಪತ್ನಿ ಶೀಲಾವತಿ (38) ಅಸೌಖ್ಯದಿಂದ ಡಿ. 18ರಂದು ಮಂಗಳೂರಿನಲ್ಲಿ ನಿಧನರಾದರು.
ದಿನೇಶ್ ಎಡಮಂಗಲದಲ್ಲಿ ಅಟೋ ಚಾಲಕರಾಗಿದ್ದರು. ಮದುವೆಯಾಗಿ 17 ವರ್ಷ ಆಗಿತ್ತು. ಆದರೆ ಅವರಿಗೆ ಮಕ್ಕಳಾಗಿರಲಿಲ್ಲ. ಇದರಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯ ವೈದ್ಯರ ಸಲಹೆಯಂತೆ ಸುಮಾರು 3 ತಿಂಗಳ ಹಿಂದೆ ಕೃತಕ ಗರ್ಭಧಾರಣೆ ಮಾಡಿಸಿಕೊಂಡಿದ್ದರು.ವೈದ್ಯರ ಸೂಚನೆಯಂತೆ 20 ದಿವಸಗಳಿಗೊಮ್ಮೆ ತಪಾಸಣೆ ಮಾಡಿಸುತ್ತಿದ್ದರು. ಕಳೆದ ನಾಲ್ಕು ದಿನಗಳ ಹಿಂದೆ ಶೀಲಾವತಿಯವರಿಗೆ ಅಸೌಖ್ಯಕ್ಕೆ ಒಳಗಾಗಿದ್ದರು. ಇದು ನಿನ್ನೆ ಜೋರಾದಾಗ ಮತ್ತೆ ಚಿಕಿತ್ಸೆ ನೀಡುತ್ತಿದ್ದ ಮಂಗಳೂರಿನ ವೈದ್ಯರನ್ನು ಸಂಪರ್ಕಿಸಿದಾಗ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಸೂಚಿಸಿದರೆನ್ನಲಾಗಿದೆ. ನಿನ್ನೆ ಡಿ. 18ರಂದು ಅನಾರೋಗ್ಯ ಇನ್ನಷ್ಡು ಜಾಸ್ತಿಯಾಗಿ ವಾಂತಿ ಮಾಡಿದರೆನ್ನಲಾಗಿದೆ. ಆಗ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ತೆರಳುತ್ತಿದ್ದಾಗ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.