ಸುಳ್ಯ ಕೆ.ಎಸ್.ಆರ್.ಟಿ. ಬಸ್ ನಿಲ್ದಾಣದಕ್ಕೆ ಆಗಮಿಸುವ ಪ್ರಯಾಣಿಕರೇ ಎಚ್ಚರ ! ದಿನದಿಂದ ದಿನಕ್ಕೆ ಇಲ್ಲಿ ಕಳ್ಳತನ ಹೆಚ್ಚುತ್ತಿದ್ದು ಕಳ್ಳನೋರ್ವ ಪ್ರಯಾಣಿಕರೊಬ್ಬರ ಅಮೂಲ್ಯ ವಸ್ತುಗಳಿರುವ ಬ್ಯಾಗ್ ಮತ್ತು ಶೂ ಕದಿಯುತ್ತಿರುವ ದ್ರಶ್ಯ ಸಿ.ಸಿ ಕೆಮಾರದಲ್ಲಿ ಸೆರೆಯಾಗಿದೆ. ಪ್ರಯಾಣಿಕ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತ ಮಲಗಿದ್ದರು.ಪ್ರಯಾಣಿಕ ನಿದ್ದಗೆ ಜಾರುತ್ತಿದ್ದಂತೆ ಕಳ್ಳ ಶೂ ಮತ್ತು ಬ್ಯಾಗನ್ನು ಕದ್ದು ಅಲ್ಲಿಂದ ಪರಾರಿಯಾಗಿದ್ದಾನೆ.
ಬಸ್ ನಿಲ್ಧಾಣದಲ್ಲಿ ರಾತ್ರಿ ಪಾಳಿಯಲ್ಲಿ ವಾಚ್ ಮ್ಯಾನ್ ಇಲ್ಲದಿರುವುದೇ ಸರಣಿ ಕಳ್ಳತನಗಳು ನಡೆಯಲು ಕಾರಣವಾಗಿದೆ ಎಂದು ಪ್ರಯಾಣಿಕರು ಮಾಧ್ಯಮ ವರದಿಗಾರರೊಂದಿಗೆ ದೂರಿಕೊಂಡಿದ್ದಾರೆ.ಬಸ್ ನಿಲ್ಧಾಣದ ಅಂಗಡಿ ಮಾಲಕರು ರಾತ್ರಿ ಪಾಳಿಗೆ ವಾಚ್ ಮ್ಯಾನ್ ನೇಮಕ ಮಾಡಬೇಕೆಂದು ಸುಳ್ಯದ ಬಸ್ ಡಿಪೋ ಮ್ಯಾನೇಜರ್ ಗೆ ಮನವಿ ಮಾಡಿಕೊಂಡರು ವಾಚ್ ಮ್ಯಾನ್ ನೇಮಕ ಮಾಡಿಲ್ಲ ಎಂದು ದೂರಲಾಗಿದೆ.ಕಳ್ಳತನದ ವೀಡಿಯೋ ನೋಡಲು ಈ ಕೆಳಗಿನ ಲಿಂಕ್ ಒತ್ತಿ.https://youtu.be/LFV4rLh8sMA?si=hi-RswzlDLqpHUTH