ಪ್ರತಿ ವರ್ಷ ಡಿಸೆಂಬರ್ನಲ್ಲಿಯೇ ಅತೀಹೆಚ್ಚು ಸಾವು ನೋವುಗಳು ಸಂಭವಿಸುತ್ತವೆಯಂತೆ… ಹೌದ ?ವಿಶೇಷವಾಗಿ ವರ್ಷದ ಕೊನೆಯ 3-4 ದಿನಗಳಲ್ಲಿ ರಾಷ್ಟ್ರದ/ರಾಜ್ಯದ ನಾಯಕರ ಹೆಚ್ಚು ನಿಧನಗಳನ್ನು ನೋಡುತ್ತೇವೆಯಂತೆ. ಈಗಾಗಲೇ ಅನೇಕ ಗಣ್ಯರು, ಎಸ್.ಎಂ.ಕೃಷ್ಣ, ಜಾಕೀರ್ ಹುಸೇನ್, ಪದ್ಮಶ್ರೀ ತುಳಸಿಗೌಡ, ನಟಿ ಶೋಭಿತಾ, ಐಪಿಎಸ್ ಅಧಿಕಾರಿ ಹರ್ಷವರ್ಧನ ಮುಂತಾದವರ ನಿಧನವಾಗಿದೆ. ಡಿಸೆಂಬರ್ ತಿಂಗಳಲ್ಲಿ ಅತೀಹೆಚ್ಚು ಚಳಿ ಇರುವುದರಿಂದ ಅತೀ ಹಿರಿಯರಿಗೆ ಮತ್ತು ಅತೀ ಕಿರಿಯ ಜೀವಗಳಿಗೆ ದೈಹಿಕ ತೊಂದರೆ ಮತ್ತು ಹೃದಯಾಘಾತ ಹೆಚ್ಚು. ಅತೀ ಹೆಚ್ಚು ಪ್ರವಾಸ ಕೈಗೊಳ್ಳುವ ತಿಂಗಳಾಗಿದೆ. ಈ ತಿಂಗಳಿನಲ್ಲಿ ರಸ್ತೆಗಳು ಕಿಕ್ಕಿರಿದಿರುವುದರಿಂದ ಅಪಘಾತಗಳು ಹೆಚ್ಚಾಗುತ್ತವೆ.