ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು -ವಾರ್ಷಿಕೋತ್ಸವ ಸಮಾರಂಭ

Ad Widget . Ad Widget . Ad Widget . . Ad Widget . . Ad Widget .

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ವಾರ್ಷಿಕೋತ್ಸವ ಸಮಾರಂಭವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯ ಇದರ ಪ್ರಧಾನ ಕಾರ್ಯದರ್ಶಿಗಳಾದ ಆರ್ಕಿಟೆಕ್ಟ್ ಅಕ್ಷಯ್ ಕೆ ಸಿ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಈಜಿ ಆಯುರ್ವೇದ ಹಾಸ್ಪಿಟಲ್ ಮಂಗಳೂರು ಇದರ ಮುಖ್ಯ ವೈದ್ಯಕೀಯ ಅಧಿಕಾರಿಯಾದ ಡಾ. ರವಿಗಣೇಶ್ ಮೊಗ್ರ ಉಪಸ್ಥಿತರಿದ್ದರು.
ಕಾರ್ಯಕ್ರಮದ ವೇದಿಕೆಯಲ್ಲಿ ಎ ಒ ಎಲ್ ಇ (ರಿ.) ಇದರ ಕಾರ್ಯದರ್ಶಿಗಳಾದ ಶ್ರೀ. ಹೇಮನಾಥ ಕೆ ವಿ, ಕೌನ್ಸಿಲ್ ಮೆಂಬರ್ ಶ್ರೀ ಜಗದೀಶ್ ಅಡ್ತಲೆ, ಅಡ್ವೈಸರ್ ಪ್ರೊ. ದಾಮೋದರ ಗೌಡ, ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿಯಾದ ಡಾ. ಹರ್ಷಿತಾ ಎಂ, ಕಾಲೇಜಿನ ಶೈಕ್ಷಣಿಕ ಅಧಿಕಾರಿಯದ ಡಾ. ಕವಿತಾ ಬಿ ಎಂ, ವಿದ್ಯಾರ್ಥಿ ಸಂಘದ ನಾಯಕ ಶೀತಲ್ ಗೌಡ, ಮಹಿಳಾ ಪ್ರತಿನಿಧಿಯಾದ ನಿತ್ಯಾ ದಾಸ್, ಸ್ನಾತಕೋತ್ತರ ವಿಭಾಗದ ಪ್ರತಿನಿಧಿಯಾದ ಡಾ. ಅನುಷಾ ಎಂ, ಕಾರ್ಯದರ್ಶಿಯಾದ ಕು. ಲಕ್ಷ್ಮೀ ಸುರೇಶ್, ಕಲಿಕಾ ವೈದ್ಯರುಗಳ ಪ್ರತಿನಿಧಿಗಳಾದ ಡಾ. ಆರ್ಥಿಕ ಕೆ ಎಸ್ ಹಾಗೂ ಡಾ. ಸ್ನೇಹ ಕೆ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ ಯವರು ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು.
ಮುಖ್ಯ ಅತಿಥಿಯಾದ ಆರ್ಕಿಟೆಕ್ಟ್ ಅಕ್ಷಯ್ ಕೆಸಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ, ಉತ್ತಮ ವೈದ್ಯರಾಗಲು ಸಮಯ ಪ್ರಜ್ಞೆ ಹಾಗೂ ಶ್ರದ್ಧೆ ಅತ್ಯಮೂಲ್ಯ ಮತ್ತು ಇವುಗಳನ್ನು ಜೀವನದಲ್ಲಿ ಅಳವಡಿಸುವ ವಿಧಾನಗಳನ್ನು ಕಾಲೇಜಿನ ವಿದ್ಯಾರ್ಥಿಗಳಿಗೆ ತಿಳಿಸುತ್ತಾ ಶುಭ ಹಾರೈಸಿದರು. ಇನ್ನೋರ್ವ ಮುಖ್ಯ ಅತಿಥಿಯಾದ ಡಾ. ರವಿಗಣೇಶ್ ಮೊಗ್ರ ಇವರ ಸಾಧನೆಗಳನ್ನು ಗುರುತಿಸಿ ಕಾಲೇಜಿನಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳನ್ನು ಶುಭಹಾರೈಸುತ್ತಾ ಡಾ. ರವಿಗಣೇಶ್ ಮೊಗ್ರ ಇವರು ತಮ್ಮ ಕಾಲೇಜು ದಿನಗಳು ಹಾಗೂ ಕಾಲೇಜು ಅಂದಿನಿಂದ ಈ ದಿನದವರೆಗೆ ಉತ್ತಮವಾಗಿ ಬೆಳೆದು ಬಂದ ರೀತಿಯ ಕುರಿತು ವಿವರಿಸಿ, ಆಯುರ್ವೇದವು ದೇಶದಲ್ಲಿ ಮಾತ್ರ ಸೀಮಿತವಾಗದೆ ವಿದೇಶದಲ್ಲಿಯೂ ಇದರ ಪ್ರಾಮುಖ್ಯತೆಯ ಅರಿವು ಮೂಡಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನಲ್ಲಿ 25 ವರ್ಷಕ್ಕಿಂತ ಅಧಿಕ ಸೇವೆ ಸಲ್ಲಿಸಿದ ಪ್ರಸೂತಿ ತಂತ್ರ ಹಾಗು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥರಾದ ಪ್ರೊ. ಡಾ. ಅಶೋಕ್ ಕೆ, ಕಾಯಚಿಕಿತ್ಸ ವಿಭಾಗದ ಪ್ರೊ. ಡಾ. ಕೃಷ್ಣಪ್ರಕಾಶ್ ಎಂ ಕೆ ಹಾಗು ಕಾಲೇಜಿನ ಕಚೇರಿ ಅಧೀಕ್ಷಕರಾದ ಚಂದ್ರಕುಮಾರ್ ಕೆ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜೊತೆಗೆ ಶೈಕ್ಷಣಿಕ ಹಾಗು ಸಹ ಪಠ್ಯದಲ್ಲಿ ಉತ್ತಮ ಫಲಿತಾಂಶ ಸಾಧಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕ ಶೀತಲ್ ಗೌಡ ಸ್ವಾಗತಿಸಿ, ಕು.ನೀಲಿಮ ಹಾಗು ಬಳಗ ಆಶಯ ಗೀತೆಯನ್ನು ಹಾಡಿದರು, ಕು. ಅಶ್ವಿನಿ ಭಟ್ ಹಾಗು ಕು. ಚಿತ್ಕಾಲ ಭಾರದ್ವಾಜ್ ಪ್ರಾರ್ಥಿಸಿದರು, ಸ್ನಾತಕೋತ್ತರ ವಿಭಾಗದ ಪ್ರತಿನಿಧಿಯಾದ ಡಾ. ಅನುಷಾ ಎಂ ವಂದಿಸಿದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಕು. ಯಶಸ್ವಿನಿ ಹಾಗು ಧ್ಯಾನ್ ವಿಜಯ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶೃತಿ ಗಾಯನ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

. Ad Widget . Ad Widget . Ad Widget

Leave a Comment

Your email address will not be published. Required fields are marked *

error: Content is protected !!
Scroll to Top