ಕಂಟೈನರ್ ಲಾರಿ ಸ್ಕೂಟರ್ ಗೆ ಢಿಕ್ಕಿಯಾಗಿ ಸ್ಕೂಟಿ ಸವಾರರಾದ ದಂಪತಿ ಮ್ರತಪಟ್ಟ ಘಟನೆ ಸಂಪಾಜೆ ಬಳಿಯ ಚೆಡಾವಿನಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.
ಮ್ರತಪಟ್ಟ ದಂಪತಿಯನ್ನು ಎಂ.ಚಿದಾನಂದ ಆಚಾರ್ಯ ಮತ್ತು ಅವರ ಧರ್ಮ ಪತ್ನಿ ನಳೀನಿ (38) ಎಂದು ಗುರುತಿಸಲಾಗಿದೆ.ಅವರ ತಮ್ಮ ಊರಾದ ಕೊಡಗಿನ ನೆಲ್ಲಿಹುದುಕೇರಿಯಿಂದ ಪುತ್ತೂರಿಗೆ ಸ್ಕೂಟಿಯಲ್ಲಿ ಹೋಗುತ್ತಿದ್ದಾಗ
ಸುಳ್ಯದಿಂದ ಮಡಿಕೇರಿ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿ ಸ್ಕೂಟಿಗೆ ಸಂಪಾಜೆಯ ಚೆಡಾವು ಬಳಿ ಡಿಕ್ಕಿಯಾಯಿತು. ಪರಿಣಾಮ ಚಿದಾನಂದ ಆಚಾರ್ಯ ಸ್ಥಳದಲ್ಲಿಯೇ ಮೃತಪಟ್ಟರು. ಸಹಸವಾರೆಯಾಗಿದ್ದ ನಳಿನಿಗೆ ಗಂಭೀರ ಗಾಯಗಳಾಗಿದ್ದ ಪರಿಣಾಮ ಸುಳ್ಯದ ಖಾಸಗಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಲಾಯಿತು.ಆದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮ್ರತಪಟ್ಟರು.
ಮಗನನ್ನು ಬಸ್ಸಲ್ಲಿ ಕಳುಹಿಸಿ ಕೊಟ್ಟ ದಂಪತಿ
ಅವರು ಪುತ್ತೂರಿನ ತಮ್ಮ ಸಂಬಂಧಿಕರ ಮನೆಗೆ ಕಾರ್ಯಕ್ರವೊಂದಕ್ಕೆ
12 ವರ್ಷದ ಬಾಲಕನನ್ನು ಬಸ್ಸಲ್ಲಿ ಕಳುಹಿಸಿ ಕೊಟ್ಟು ತಾವು ಸ್ಕೂಟಿಯಲ್ಲಿ ತೆರಳುತ್ತಿದ್ದರು.
ಮಡಿಕೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಲಾರಿ ಚಾಲಕ ಅಸ್ಸಾಂ ಮೂಲದ ರಾಜು ಎಂಬಾತನ್ನು ಬಂಧಿಸಿದ್ದಾರೆ.