ಕರ್ನಾಟಕ ಸರಕಾರವು ಹಲವು ಇಲಾಖೆಗಳಿಗೆ ನಾಮನಿರ್ದೇಶಕ ಸದಸ್ಯರನ್ನು ಆಯ್ಕೆ ಮಾಡುತ್ತಿದ್ದು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮವೂ ಸೇರಿದಂತೆ) ಪರಿಣಾಮಕಾರಿ ಅನುಷ್ಠಾನದ ಪರಿಶೀಲನೆಗಾಗಿ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕು ಮಟ್ಟದ ತ್ರೈಮಾಸಿಕ ಪರಿಶೀಲನಾ (ಕೆ.ಡಿ.ಪಿ) ಸಮಿತಿಗೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕೆಲವರನ್ನು ಸದಸ್ಯರನ್ನಾಗಿ ನಾಮನಿರ್ದೇಶನಗೊಳಿಸಿ ಆದೇಶಿಸಿದೆ.ಸದಸ್ಯರ ವಿವರ ಈ ಕೆಳಗಿನಂತಿದೆ.
ಸುಳ್ಯ ತಾಲೂಕು ಪಂಚಾಯಿತಿ ಕೆಡಿಪಿ ಇದರ ನಾಮ ನಿರ್ದೇಶನದ ಸದಸ್ಯರಾಗಿ ಸುಳ್ಯದಲ್ಲಿ ವಕೀಲರು ಹಾಗೂ ನೋಟರಿಯಾಗಿ ಸೇವೆ ಸಲ್ಲಿಸುತ್ತಿರುವ ಕಾಂಗ್ರೆಸ್ ಪಕ್ಷದ ಅಲೆಟ್ಟಿಯ ಗ್ರಾಮದ ಧರ್ಮಪಾಲ ಕೊಯಂಗಾಜೆ, ಐವರ್ನಾಡಿನ ಜಯಪ್ರಕಾಶ್ ನೇಕ್ರಪಾಡಿ, ಗುತ್ತಿಗಾರಿನ ಪರಮೇಶ್ವರ ಕೆಂಬಾರೆ, ಜಾಲ್ಸೂರಿನ ತೀರ್ಥರಾಮ ಬಾಳಜೆ, ಅರಂತೋಡಿನ ಆಶ್ರಫ್ ಗುಂಡಿ, ಬೆಳ್ಳಾರೆಯ ಶಕುಂತಳಾ ನಾಗರಾಜ್ ಇವರುಗಳು ಆಯ್ಕೆ ಮಾಡಿದೆ.