ಕೃಷಿ ಇಲಾಖೆ,ಕೃಷಿ ವಿಜ್ಞಾನ ಕೇಂದ್ರ ಮಂಗಳೂರು,ಕೃಷಿಕ ಸಮಾಜ ಸುಳ್ಯ, ರೈತ ಉತ್ಪಾದಕರ ಕಂಪೆನಿ ಸುಳ್ಯ ನಿಯಮಿತ, ತಾಲೂಕು ಪಂಚಾಯತ್ ಸುಳ್ಯ ,ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಬೆಂಗಳೂರು ಕೆ.ಎಸ್.ಆರ್.ಎಲ್ ಪಿ.ಯಸ್ ,ಜಿಲ್ಲಾ ಪಂಚಾಯತ್ ಮಂಗಳೂರು, ಸಂಜೀವಿನಿ ಒಕ್ಕೂಟ ಸುಳ್ಯ ಇವರುಗಳ ಸಹಯೋಗದಲ್ಲಿ ಎ.ಪಿ.ಎಂ.ಸಿ ಕಟ್ಟಡ ದಲ್ಲಿ ರೈತ ದಿನಾಚರಣೆ ಕಾರ್ಯಕ್ರಮ ಡಿ.23ರಂದು ನಡೆಯಿತು. ರೈತ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಶ್ರೀ ದೇರಣ್ಣ ಗೌಡ ತಾಲೂಕು ಅಧ್ಯಕ್ಷರು ಕೃಷಿಕ ಸಮಾಜ ಸುಳ್ಯ,ಶ್ರೀ ಲೋಲಾಜಾಕ್ಷ ಅಧ್ಯಕ್ಷರು ರೈತ ಸಂಘ ಸುಳ್ಯ, ಸಹಾಯಕ ಕೃಷಿ ನಿರ್ದೇಶಕರು ಶ್ರೀ ಗುರುಪ್ರಸಾದ್ ಕೃಷಿ ಇಲಾಖೆ ಸುಳ್ಯ,ಶ್ರೀಮತಿ ಸುಹಾನ ತೋಟಗಾರಿಕಾ ಇಲಾಖೆ ಸುಳ್ಯ, ಅಧ್ಯಕ್ಷರು ಶ್ರೀ ವೀರಪ್ಪ ಗೌಡ ರೈತ ಉತ್ಪಾದಕರ ಕಂಪೆನಿ ಸುಳ್ಯ ,ಶ್ರೀ ಟಿ. ಜೇ ರಮೇಶ್ ಮುಖ್ಯಸ್ಥರು ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ಶ್ರೀ ಹರೀಶ್ ಶೆಣೈ ವಿಜ್ಞಾನಿಗಳು ಬೇಸಾಯ ಶಾಸ್ತ್ರ ಮತ್ತು ನೈಸರ್ಗಿಕ ಕೃಷಿ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ಶ್ರೀ ಮಲ್ಲಿಕಾರ್ಜುನ ವಿಜ್ಞಾನಿ ಮಣ್ಣು ಶಾಸ್ತ್ರ,
ಕೃಷಿ ವಿಜ್ಞಾನ ಕೇಂದ್ರ ಮಂಗಳೂರು, ಶ್ರೀಮತಿ ಶ್ವೇತ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಎನ್, ಆರ್, ಎಲ್,ಎಂ ತಾಲೂಕು ಪಂಚಾಯತ್ ಸುಳ್ಯ , ಇವರುಗಳು ಉಪಸ್ಥಿತರಿದ್ದರು. ಸುಳ್ಯ ಸಹಾಯಕ ಕೃಷಿ ನಿರ್ದೇಶಕರು ಶ್ರೀ ಗುರುಪ್ರಸಾದ್ ಕೃಷಿ ಇಲಾಖೆ ಸುಳ್ಯ ಇವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ಶ್ರೀ ದೇರಣ್ಣ ಗೌಡ ತಾಲೂಕು ಅಧ್ಯಕ್ಷರು ಕೃಷಿಕ ಸಮಾಜ ಸುಳ್ಯ ಇವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದರು. ಕೃಷಿಕ ಸಮಾಜ ಸುಳ್ಯ ಇದರ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು. ಸಮಗ್ರ ಕೃಷಿಕರೆಂದು ಗುರುತಿಸಿ ಐವರ್ನಾಡು ಗ್ರಾಮ ಪಂಚಾಯತ್ ಶ್ರೀ ನವೀನ್ ಚಂದ್ರ ಚಾತುಬಾಯಿ,ಪ್ರಗತಿಪರ ಕೃಷಿಕ ರಾಗಿ ನೆಲ್ಲೂರು ಕೆಮ್ರಜೆ ಶ್ರೀ ಮಹೇಶ್ ಗಟ್ಟಿಗಾರು ,ಸಂಪಾಜೆ ಗ್ರಾಮ ಪಂಚಾಯತ್ ಶ್ರೀ ವಿಜಯ್ ಕುಮಾರ್ ಕುಯಿಂತೋಡು ಇವರುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷಕರಾದ ಶ್ರೀ ಲೋಲಜಾಕ್ಷ ಭೂತಕಲ್ಲು ಅಧ್ಯಕ್ಷರು ರೈತ ಸಂಘ ಸುಳ್ಯ ಇವರು ರೈತರ ಪರವಾಗಿ ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಸನ್ಮಾನಿತಗೊಂಡ ಶ್ರೀ ನವೀನ್ ಚಂದ್ರ ಚಾತುಬಾಯಿ ಸಮಗ್ರ ಕೃಷಿಕರಾಗಲು ಮಾಡಿದ ಪರಿಶ್ರಮ ಮತ್ತು ಕೃಷಿಕರಿಗಿರುವ ಸಮಸ್ಯೆಗಳ ಕುರಿತಾಗಿ ಮಾತನಾಡಿದರು. ಡಾ||ಹರೀಶ್ ಶೆಣೈ ವಿಜ್ಞಾನಿ ಬೇಸಾಯ ಶಾಸ್ತ್ರ,ನೈಸರ್ಗಿಕ ಕೃಷಿ ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು ಶ್ರೀ ಮಲ್ಲಿಕಾರ್ಜುನ ವಿಜ್ಞಾನಿ ಮಣ್ಣು ಶಾಸ್ತ್ರ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು,ಇವರುಗಳು ಸಾವಯವ ಕೃಷಿ,ನೈಸರ್ಗಿಕ ಕೃಷಿ,ಎರೆಹುಳು ಗೊಬ್ಬರ ತಯಾರಿಕೆ,ಅಡಿಕೆ ಮತ್ತು ತೆಂಗು ಗಿಡಗಳು ಹಾಗೂ ಮರಗಳಿಗೆ ಭಾದಿಸುವ ರೋಗಗಳು,ಅವುಗಳ ನಿರ್ವಹಣೆ,ಪೋಷಣೆ ಕುರಿತು ಆಯಾ ಗೊಬ್ಬರ ಉಪಯೋಗಿಸುವ ರೀತಿ ಪ್ರಾಜೆಕ್ಟರ್ ಮೂಲಕ ಮಾಹಿತಿ ನೀಡಿದರು. ಶ್ರೀಮತಿ ಶ್ವೇತ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಎನ್. ಆರ್ .ಎಲ್ ಎಂ ತಾಲೂಕು ಪಂಚಾಯತ್ ಸುಳ್ಯ ಇವರು ಕೃಷಿ ಸಖಿ ಗಳ ಜವಾಬ್ದಾರಿ,ಪರಿಶ್ರಮದಿಂದ ಕೃಷಿ ಚಟುವಟಿಕೆಯಲ್ಲಿ ಕೃಷಿಕರು ತೊಡಗಿಸಿಕೊಂಡಲ್ಲಿ ಯಾವುದೇ ಇಲಾಖೆ,ಮತ್ತು ಒಕ್ಕೂಟ ದ ಕೃಷಿ ಸಖಿಗಳು ಗುರುತಿಸಿ ಸರ್ಕಾರದ ಯೋಜನೆಗಳ ಸವಲತ್ತುಗಳನ್ನು ಕೊಡಿಸುವಲ್ಲಿ ಸಂಜೀವಿನಿ ಸಹಕಾರ ನೀಡುತ್ತದೆ ಎಂದು ತಿಳಿಸಿದರು. ಡಾ|| ಟಿ.ಜೆ ರಮೇಶ್ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು ಕೆ.ವಿ.ಕೆ ಯಲ್ಲಿ ದೊರಕುವ ಸವಲತ್ತು ಗಳನ್ನು ಸಂಜೀವಿನಿ ಕೃಷಿ ಸಖಿಯರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಸುಳ್ಯ ತಾಲೂಕಿನಲ್ಲಿ ಪರಿಶಿಷ್ಟ ಜಾತಿ ರೈತ ಫಲಾನುಭವಿಗಳಿಗೆ ಕೊಡಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿರುತ್ತಾರೆ. ಕೃಷಿಸಖಿಯರಿಗೆ ಎಲ್ಲ ಕೆಲಸಗಳಿಗೆ ಸಂಜೀವಿನಿ ಟಿ.ಪಿ.ಎಂ ಶ್ರೀಮತಿ ಶ್ವೇತ ಹಾಗೂ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಗುರುಪ್ರಸಾದ್ ಪೂರ್ಣ ಸಹಕಾರ ನೀಡುತ್ತಿದ್ದು,ಕಾರ್ಯಕ್ರಮ ಯಶಸ್ವಿ ಗೊಳ್ಳಲು ಸಹಕಾರಿ ಆಗುತ್ತಿದೆ ಎಂದು ಶ್ಲಾಘಿಸಿದರು. ಪರಿಶಿಷ್ಟ ಜಾತಿ ಅರ್ಹ ರೈತ ಫಲಾನುಭವಿಗಳಿಗೆ ಗೊಬ್ಬರ,ಡ್ರಮ್ ಮತ್ತು ಎರೆಹುಳು ತೊಟ್ಟಿಗಳನ್ನು ಉಚಿತವಾಗಿ ವಿತರಿಸಲಾಯಿತು. ಕು. ನಂದಿತಾ ಬಿ. ಟಿ.ಎಂ ಕೃಷಿ ಇಲಾಖೆ ಸುಳ್ಯ ಇವರು ಕಾರ್ಯಕ್ರಮ ನಿರೂಪಿಸಿದರು.
ಕು.ಸ್ಮಿತಾ ಎ. ಟಿ.ಎಂ ಕೃಷಿ ಇಲಾಖೆ ಪಂಜ ವಲಯ ಇವರು ಸನ್ಮಾನ ಸ್ವೀಕರಿಸಿದ ಅತಿಥಿಗಳ ಕಿರು ಪರಿಚಯ ಮಾಡಿದರು. ಉಪಸ್ಥಿತಿಯಲ್ಲಿದ್ದ ಅತಿಥಿಗಳಿಗೆ ಅರಣ್ಯ ಇಲಾಖೆ ಯ ಮಾವಿನ ಗಿಡಗಳನ್ನು ವಿತರಿಸಲಾಯಿತು. ಶ್ರೀಮತಿ ಮೋಹಿನಿ ಕೃಷಿ ಸಖಿ ಸಂಪಾಜೆ ಇವರು ಎಲ್ಲರಿಗೂ ಧನ್ಯವಾದ ತಿಳಿಸಿದರು. ಕಾರ್ಯಕ್ರಮದಲ್ಲಿ ಚಹಾ ಮತ್ತು ಊಟ ದ ವ್ಯವಸ್ಥೆಯನ್ನು ಮಾಡಲಾಯಿತು. ಎಸ್.ಸಿ. ರೈತ ಫಲಾನುಭವಿಗಳು,ಕೃಷಿಕರು,
ಒಕ್ಕೂಟದ ಕೃಷಿ ಸಖಿಗಳೂ,ಇಲಾಖೆಯ ಸಿಬ್ಬಂದಿ ಗಳು,ರೈತ ಉತ್ಪಾದಕರ ಕಂಪೆನಿ ಯ ಸಿಬ್ಬಂದಿ ಗಳು, ಎ. ಪಿ.ಎಂ.ಸಿ ಸಿಬ್ಬಂದಿಗಳು ಹಾಜರಿದ್ದರು.