ಕೆಲವರು ಉಗುರು ಕಚ್ಚುವುದನ್ನು ನಾವು ನೋಡುತ್ತಿರುತ್ತೇವೆ.ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಕರೆಯಲಾಗುತ್ತದೆ.
ಪದೇ ಪದೇ ಉಗುರು ಕಚ್ಚುವುದರಿಂದ, ಅವುಗಳಲ್ಲಿ ಇರುವ ಬ್ಯಾಕ್ಟಿರಿಯಾಗಳು ಬೆರಳುಗಳ ಮೂಲಕ ಬಾಯಿಗೆ ಹೋಗುತ್ತವೆ. ಇದು ಹೊಟ್ಟೆ ಮತ್ತು ಕರುಳಿನ ಸೋಂಕುಗಳಿಗೆ ಕಾರಣವಾಗಬಹುದು. ಉಗುರು ಕಚ್ಚುವಿಕೆಯು ಬೆರಳುಗಳ ಹೊರಚರ್ಮವನ್ನು ಹಾನಿಗೊಳಿಸುತ್ತದೆ. ಉಗುರುಗಳ ಸುತ್ತಲೂ ಹುಣ್ಣುಗಳನ್ನು ಉಂಟುಮಾಡುತ್ತದೆ. ಸ್ವಚ್ಛವಿಲ್ಲದ ಉಗುರುಗಳನ್ನು ಬಾಯಿಗೆ ಹಾಕಿಕೊಂಡರೆ ಸೋಂಕು ಉಂಟಾಗುತ್ತದೆ. ಇದರಿಂದ ಆರೋಗ್ಯ ಕೇಡುವ ಸಾಧ್ಯತೆ ಹೆಚ್ಚಾಗಿರುತ್ತದೆ.ಈ ಕಾರಣದಿಂದ ಉಗುರು ಕಚ್ಚದಿರುವುದೇ ಸೂಕ್ತವಾಗಿದೆ.ಉಗುರು ಕಚ್ಚದೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ