ಬೆಂಗಳೂರಿನ ದಕ್ಷಿಣ ಕ್ಷೇತ್ರದ ಸಂಸದ ಸ್ಪುರದ್ರೂಪಿ ಯುವಕ ತೇಜಸ್ವಿ ಸೂರ್ಯ ಅವರು ಜೀವನದ ಪ್ರಮುಖ ಕಾಲಘಟ್ವದ ಹೊಸ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದು ಮದುವೆಗೆ ದಿನ ನಿಗದಿಪಡಿಸಲಾಗಿದೆ. ಯುವ ಸಂಸದರು ಕೈ ಹಿಡಿಯುತ್ತಿರುವ ಆ ಹುಡುಗಿ ಯಾರೆಂದು ಎಲ್ಲರಲ್ಲೂ ಕುತೂಹಲ ಇರಬಹುದು.
ತೇಜಸ್ವಿ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಗೆಲುವು ಪಡೆದಿದ್ದರು. 2024ರಲ್ಲೂ ಇದೇ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎರಡನೇ ಬಾರಿ ಗೆಲುವು ಸಾಧಿಸಿ ಸಂಸದರಾಗಿದ್ದಾರೆ. ಅವರ ಹುಡುಗಿ ಯಾರೆಂದು ತಿಳಿದಿದ್ದು ಮದುವೆ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರ ಕೂಡ ದೊರಕಿದೆ. 2025ರ ಮಾರ್ಚ್ 4 ರಂದು ಬಿಜೆಪಿ ಯುವ ಸಂಸದನ ವಿವಾಹ ನಿಶ್ಚಯವಾಗಿದೆ.
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಚೆನ್ನೈ ಮೂಲದ ಸಿವಶ್ರೀ ಸ್ಕಂದ ಪ್ರಸಾದ್ ಅವರ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಸಿವಶ್ರೀ ಸ್ಕಂದ ಪ್ರಸಾದ್ ಅವರು ಗಾಯಕಿ ಆಗಿದ್ದು ಉತ್ತಮವಾಗಿ ಹಾಡುಗಳನ್ನು ಹಾಡುತ್ತಾರೆ. ಇದರ ಜೊತೆಗೆ ಹರಿಕಥೆ, ಭಜನೆ, ಸೈಕ್ಲಿಂಗ್, ವಾಕ್‌ಥಾನ್ ಮೂಲಕ ಗಮನ ಸೆಳೆಯುತ್ತಾರೆ. ಕಳೆದ ವರ್ಷ ರಾಮಾಯಣ ಹಾಡು ಹಾಡಿದ್ದಕ್ಕೆ ಪ್ರಧಾನಿ ಮೋದಿ ಅವರು ಉತ್ತಮವಾಗಿ ಹಾಡಿದರೆಂದು ಟ್ವಿಟರ್‌ನಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದರು.
ಯುವ ಸಂಸದ ರಾಜಕೀಯ ಪ್ರವೇಶಕ್ಕೂ ಮೊದಲೂ ಕಾನೂನು ಪದವಿ ಪಡೆದು ವಕೀಲಿ ವೃತ್ತಿ ಅಭ್ಯಾಸ ಮಾಡುತ್ತಿದ್ದರು. ಇದರ ಜೊತೆಗೆ ಬಿಜೆಪಿಯ ಸೋಶಿಯಲ್ ಮೀಡಿಯಾ ವಿಭಾಗದಲ್ಲಿ ಮೊದಲಿಗೆ ಕೆಲಸ ಮಾಡಿದ ಅನುಭವ ಅವರಿಗಿದೆ. ಇದಾದ ಮೇಲೆ ಬಿಜೆಪಿ ಪಕ್ಷದ ಪರವಾಗಿ ಮಾಧ್ಯಮಗಳ ಚರ್ಚೆಗಳಲ್ಲಿ ಭಾಗವಹಿಸಿ ತೇಜಸ್ವಿ ಸೂರ್ಯ ರಾಜಕೀಯ ಗಣ್ಯರ ಗಮನ ಸೆಳೆದಿದ್ದರು.ಇವುಗಳೆಲ್ಲ ತೇಜಸ್ವಿ ಸೂರ್ಯ ಜನಪ್ರಿಯ ಸಂಸದರಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು.