ದುಗ್ಗಲಡ್ಕ; ಕೊಯಿಕುಳಿ ಶಾಲಾ ವಠಾರ ಮತ್ತು ನೀರಬಿದಿರೆ ಪ್ರದೇಶಕ್ಕೆ ವಿದ್ಯುತ್ ಟೌನ್ ಫೀಡರ್ ನ ವಿಸ್ತ್ರತ ಸಂಪರ್ಕ ಕಾರ್ಯಾರಂಭ: ಎಸ್ ಸಂಶುದ್ದಿನ್ ರವರಿಂದ ಚಾಲನೆ

Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಕೊಯಿಕುಳಿ ವಾರ್ಡ್ ನ ಕೊಯಿಕುಳಿ ಶಾಲಾ ವಠಾರ ನೀರಬಿದಿರೆ ಪ್ರದೇಶದ ಸುಮಾರು 30 ಮನೆಗಳಿಗೆ ಟೌನ್ ಫೀಡರ್ ನಿಂದ ಸಂಪರ್ಕ ಕಲ್ಪಿಸುವ ಕಾರ್ಯಕ್ಕೆ ಜ.10ರಂದು ಚಾಲನೆ ನೀಡಲಾಯಿತು.

Ad Widget 1 Ad Widget . Ad Widget . Ad Widget 1 Ad Widget . Ad Widget . Ad Widget . Ad Widget . Ad Widget . Ad Widget .1 Ad Widget .

ಕೊಯಿಕುಳಿ ಶಾಲಾ ಬಳಿ ನಿರ್ಮಿಸಲಾದ ನೂತನ ಟಿ.ಸಿ.ಬಳಿಯಲ್ಲಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ಸಂಶುದ್ದೀನ್ ಚಾಲನೆ ನೀಡಿ ಮಾತನಾಡಿ 2013ರಲ್ಲಿ ಈ ಯೋಜನೆ ಮಂಜೂರಾಗಿದ್ದು, ಅದು ದುಗ್ಗಲಡ್ಕದ ವರೆಗೆ ಅನುಷ್ಠಾನ ಗೊಂಡಿತ್ತು. ಆದರೆ ಈ ಪ್ರದೇಶಕ್ಕೆ ವಿಸ್ತರಣೆ ಯಾಗಿರಲಿಲ್ಲ. 2023ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರ ನೇತೃತ್ವದಲ್ಲಿ ಸುಳ್ಯದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಶಶಿಧರ ಎಂ.ಜೆ.ಯವರು ಮತ್ತು ಭವಾನಿಶಂಕರ್ ಕಲ್ಮಡ್ಕರವರು ಸಚಿವರಿಗೆ ಮನವಿ ನೀಡಿ ಒತ್ತಾಯಿಸಿದರು. ಬಳಿಕ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ನಾನು ವಿದ್ಯುತ್ ಸಚಿವರಾದ ಕೆ.ಜೆ.ಜಾರ್ಜ್ ರವರನ್ನು ಮತ್ತು ಉಸ್ತುವಾರಿ ಸಚಿವರನ್ನು ಕಂಡು ಒತ್ತಡ ಹಾಕಿ ಶೀಘ್ರವಾಗಿ ಕೆಲಸವಾಗುವಂತೆ ಆಯಿತು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ತಾ.ಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಮಾತನಾಡಿ ಜನತೆಗೆ ಅಗತ್ಯ ಮೂಲಸೌಕರ್ಯ ಮತ್ತು ಅಗತ್ಯತೆಯನ್ನು ಪೂರೈಸುವ ಜನಪ್ರತಿನಿಧಿಗಳು ಅಥವಾ ಬದ್ಧತೆಯಿಂದ ಕೆಲಸ ಮಾಡಿಕೊಡುವವರನ್ನು ಮರೆಯಬಾರದು ಹಾಗೂ ಸರಕಾರದ ಅಭಿವೃದ್ಧಿ ಕಾರ್ಯಳನ್ನು ತಳಮಟ್ಟಕ್ಕೆ ತಲುಪಿಸಿ ಕೆಲಸ ಮಾಡಿಕೊಡುವವರನ್ನು ಯಾವಾಗಲು ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.

ನಗರ ಕಾಂಗ್ರೆಸ್‌ ಅಧ್ಯಕ್ಷ ಶಶಿಧರ ಎಂ.ಜೆ.ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ನಗರ ಪಂಚಾಯತ್ ನಾಮ ನಿರ್ದೇಶನ ಸದಸ್ಯ ಭಾಸ್ಕರ ಪೂಜಾರಿ ಬಾಜಿನಡ್ಕ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಭವಾನಿಶಂಕರ ಕಲ್ಮಡ್ಕ, ಸುಳ್ಯ ಇಂಟೆಕ್‌ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಚಂದ್ರನ್ ಕೂಟೇಲು, ನಾರಾಯಣ ಟೈಲ‌ರ್, ಮಂಜುನಾಥ ಕಂದಡ್ಕ, ಹಸೈನಾ‌ರ್ ಕೊಳಂಜಿಕೋಡಿ,ಪರಮೇಶ್ವರ ನಾಯ್ಕ ನೀರಬಿದಿರೆ,ಇಬ್ರಾಹಿಂ ನೀರಬಿದಿರೆ, ನಾರಾಯಣ ನೀರಬಿದಿರೆ, ಅರುಣಾಚಲ ಕೂಟೇಲು, ವೆಂಕಟ್ರಮಣ ಇಟ್ಟಿಗುಂಡಿ, ಸುರೇಶ್‌ಕುಮಾರ್ ಕಂದಡ್ಕ ಬಾಲಸುಬ್ರಹ್ಮಣ್ಯ ಮೊಂಟಡ್ಕ , ಯತೀಶ್ ಹಿರಿಯಡ್ಕ ಹಾಗೂ ಸ್ಥಳೀಯ ಪಲಾನುಭವಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top