ಬೆಳ್ತಂಗಡಿ: ಕರ್ನಾಟಕ ರಾಜ್ಯ ಡಾ. ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ನೃತ್ಯ ಪರಿಕರಗಳ ವಿಶ್ವವಿದ್ಯಾನಿಲಯ ಮೈಸೂರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಬೆಳ್ತಂಗಡಿ ತಾಲೂಕಿನ ಬಂದರು ಗ್ರಾಮದ ಪಾನೆಕಲ್ಲಿನ ಜ್ಞಾನಶ್ರೀ ಪಿ.ಎಸ್ ಉತ್ತಮ ಶ್ರೇಯಾಂಕದೊಂದಿಗೆ ತೇರ್ಗಡೆಯಾಗಿದ್ದಾರೆ.
ಜ್ಞಾನಶ್ರೀ ಶ್ರೀ ಶಾರದಾ ಕಲಾ ಕೇಂದ್ರ ಟ್ರಸ್ಟ್ ರಿಜಿಸ್ಟರ್ಡ್ ಪುತ್ತೂರು ಇದರ ನಿರ್ದೇಶಕ ವಿದ್ವಾನ್ ಸುದರ್ಶನ್ ಎಂ. ಎಲ್. ಭಟ್ ಅವರ ಶಿಷ್ಯೆ. ವಿದುಷಿ ಡಿಂಪಲ್ ಶಿವರಾಜ್ ಶ್ರೀ ಶಾರದಾ ಕಲಾ ಶಾಲೆ ಪದ್ಮುಂಜ ಶಾಖೆಯಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾಳೆ.ಬಂದರು ಪೆರ್ಲ ಬೈಪಾಡಿ ಸರಕಾರಿ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ.
ಪಾನೆಕಲ್ಲು ಸುರೇಶ್ ಗೌಡ ಹಾಗೂ ನಿರ್ಮಾಲ ದಂಪತಿ ಪುತ್ರಿ.ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಮುಪ್ಪಸೇರು ಗೋಪಾಲಕೃಷ್ಣ ಸತ್ಯವತಿ ದಂಪತಿಯ ಮೊಮ್ಮಗಳು.