ತೊಡಿಕಾನ ಗ್ರಾಮದ ಪಡ್ಪು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ನಡೆಯುತ್ತಿದ್ದು ದೇಣಿಗೆ ಸಂಗ್ರಹ ಕಾರ್ಯಕ್ಕೆ ಜ.12 ದೈವಸ್ಥಾನದಲ್ಲಿ ಪ್ರಾರ್ಥಿಸಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಬಾಳೆಕಜೆ,ಗೌರವ ಸಲಹೆಗಾರರಾದ
ಸಂತೋಷ್ ಕುತ್ತಮೊಟ್ಟೆ,ಕೆ ಕೆ ನಾರಾಯಣ ಕುಂಟುಕಾಡು ಇತರ ಪದಾಧಿಕಾರಿಗಳು,ಬೈಲುವಾರು ಸಮಿತಿಯವರು ಉಪಸ್ಥಿತರಿದ್ದರು.
ದೈವಸ್ಥಾನದ ಜೀರ್ಣೊದ್ದಾರ ಕಾರ್ಯಕ್ಕೆ ಊರ ಹಾಗೂ ಪರ ಊರಿನ ದಾನಿಗಳ ಸಹಕಾರ ಅಗತ್ಯವಿದ್ದು ಸಹಕಾರ ನೀಡಬೇಕೆಂದು ಸಮಿತಿಯರು ವಿನಂತಿಸಿಕೊಂಡಿದ್ದಾರೆ. ಬೈಲುವಾರು ಸಮಿತಿಗಳ ಮೂಲಕ ಮನೆವಂತಿಗೆ ಸಂಗ್ರಹ ನಡೆಯುತ್ತಿದೆ.