ತೊಡಿಕಾನ : ಮಲ್ಲಿಕಾರ್ಜುನ ದೇವಳದಲ್ಲಿ ನಡೆಯುತ್ತಿದೆ ಶ್ರದ್ದಾ ಭಕ್ತಿಯಿಂದ ಧನುಪೂಜೆ,ನಾಳೆ ಈ ವರ್ಷದ ಕೊನೆಯ ಧನುಪೂಜೆ,ಹೆಚ್ಚಿನ ಸಂಖ್ಯೆಯ ಭಕ್ತರ ನಿರೀಕ್ಷೆ

ಪುರಾಣ ಪ್ರಸಿದ್ದ ಸುಳ್ಯ ಸೀಮೆಯ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಧನುರ್ ಮಾಸ ಪ್ರಯುಕ್ತ ಡಿ.16ರಿಂದ ಧನು ಪೂಜೆ ಆರಂಭಗೊಂಡಿದ್ದು ಜ.14ರಂದು ಸಮಾಪ್ತಿಯಾಗಲಿದೆ.
ಮಂಗಳವಾರ ಈ ವರ್ಷದ ಕೊನೆಯ ಧನುಪೂಜೆ ಆಗಿರುವ ಹಿನ್ನಲೆ ಮತ್ತು ಸರಕಾರಿ ರಜೆ ಇರುವ ಹಿನ್ನಲೆಯಲ್ಲಿ ಈ ದಿನ ಹೆಚ್ಚಿನ ಭಕ್ತಾಧಿಗಳು ಧನುಪೂಜೆಯಲ್ಲಿ ಭಾಗವಹಿಸುವ ‌ನಿರೀಕ್ಷೆ ಇದೆ.ದೇವಳದಲ್ಲಿ ಜೀರ್ಣೋದ್ಧಾರ ಕಾಮಗಾರಿಗಳು ಯಶಸ್ವಿಯಾಗಿ ಪೂರೈಸಿದ್ದು, ಕಳೆದ 2017ರ ಮಾರ್ಚ್ 1ರಿಂದ 11ರ ತನಕ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ಜರುಗಿದೆ. ಶ್ರೀ ಕ್ಷೇತ್ರದ ಸವಾರ್‌ಂಗೀಣ ಅಭಿವೃದ್ಧಿಗೆ ಪೂರಕವಾಗಿ ಶ್ರೀ ದೇವಳದಲ್ಲಿ ಈ ಹಿಂದೆ ನಡೆಯುತ್ತಿದ್ದ ಕೆಲವೊಂದು ಪೂಜಾ ವಿಧಿವಿಧಾನಗಳು ನಿಂತಿರುವ ಬಗ್ಗೆ ತಿಳಿದುಕೊಂಡು ಅವುಗಳ ಪೈಕಿ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿದ್ದ ‘ಧನುಪೂಜೆ’ಯನ್ನು ಕಳೆದ ಹದಿಮೂರು ವರ್ಷಗಳಿಂದ ಯಶಸ್ವಿಯಾಗಿ ನೆರವೇರಿಸಿಕೊಂಡು ಬರಲಾಗುತ್ತಿದೆ. ಶ್ರೀ ಮಲ್ಲಿಕಾರ್ಜುನ ದೇವರ ಅನುಗ್ರಹದಿಂದ ವರ್ಷದಿಂದ ವರ್ಷಕ್ಕೆ ಈ ಧನುಪೂಜೆಯಲ್ಲಿ ಪಾಲ್ಗೊಳ್ಳುವ ಭಕ್ತಾಧಿಗಳ ಸಂಖ್ಯೆ ಹೆಚ್ಚಾಗಿದೆ.ಶ್ರೀ ಕ್ಷೇತ್ರ ತೊಡಿಕಾನದಲ್ಲಿ ನೂರಾರು ವರ್ಷಗಳ ಹಿಂದಿನ ದಾಖಲೆಗಳ ಪ್ರಕಾರ ಧನುಮಾಸದಲ್ಲಿ ಧನುಪೂಜೆಗಳು ನಡೆದ ಬಗ್ಗೆ ಮಾಹಿತಿ ಇದೆ. ಸುಳ್ಯ ಸೀಮೆಗೆ ಸಂಬಂಧಪಟ್ಟ ಎಲ್ಲಾ ಭಕ್ತಾಧಿಗಳು ಈ ವಿಶೇಷ ಪೂಜೆಯಲ್ಲಿ ಭಾಗಿಗಳಾಗಿ ದೇವರ ಸಂತೃಪ್ತಿ ಹಾಗೂ ಭಕ್ತ ಜನರ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವಂತೆ
ವಿನಂತಿಸಿಕೊಳ್ಳಲಾಗಿದೆ. ವಿಶೇಷವಾಗಿ ಧನುಪೂಜೆ ಮಾಡಿಸುವವರು ದೇವಳದ ಕಛೇರಿ ಸಮಯದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕುಟುಂಬ ಸಮೇತರಾಗಿ ಪೂಜೆಯಲ್ಲಿ ಧನುಪೂಜೆಯಲ್ಲಿ ಭಾಗಿಗಳಾಗುವವರು ಕುಟುಂಬ ಸಮೇತರಾಗಿ ಶುಚಿರ್ಭೂತರಾಗಿ ಮುಂಜಾನೆ 4-45 ಗಂಟೆ ಮೊದಲೇ ಹಾಜರಿರಬೇಕು. ಶ್ರೀ ದೇವಳದಲ್ಲಿ ಮಾಮೂಲಿನಂತೆ ಜರಗುವ ಎಲ್ಲಾ ಸೇವೆಗಳೂ ನಡೆಯುವುದಲ್ಲದೆ ಧನುಪೂಜೆ ಪೂರ್ವಾಹ್ನ 5-00 ಗಂಟೆಗೆ ಜರಗುವುದು.ಪ್ರತಿ ದಿನ ಧನುಪೂಜೆಯ ಬಳಿಕ ದೇವಳದಲ್ಲಿ ಲಘು ಉಪಾಹಾರದ ವ್ಯವಸ್ಥೆ ಇದೆ.ಧನುಪೂಜೆಯ ಎಲ್ಲಾ ದಿನಗಳಲ್ಲಿ ಸೀಮೆಯ ಭಜನಾ ತಂಡಗಳಿಂದ ಪೂರ್ವಾಹ್ನ ಗಂಟೆ 4-00ಕ್ಕೆ ಭಜನಾ ಸೇವೆ ಜರುಗುವುದುಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಸೇವೆ ಮಾಡಲು ಇಚ್ಚಿಸುವ ಭಕ್ತಾಧಿಗಳು ಶ್ರೀ ದೇವಳದ ಕಛೇರಿಯನ್ನು ಸಂಪರ್ಕಿಸಬಹುದು.

Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top