ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನಾಳೆ(ಜ.24) ಸುಳ್ಯದ ನಿರೀಕ್ಷಣ ಮಂದಿರದಲ್ಲಿ ಸಾರ್ವಜನಿಕರ ಭೇಟಿಗೆ ಲಭ್ಯರಿದ್ದಾರೆ.
ಪೂರ್ವಾಹ್ನ 11.00 ಗಂಟೆಗೆ ಎಲಿಮಲೆ ಯಲ್ಲಿ ದೇವಚಳ್ಳ ಶಾಲಾ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ 1.00 ಗಂಟೆಗೆ ಕಾರ್ಯಕರ್ತರೊಂದಿಗೆ ಸಹಭೋಜನದ ನಂತರ ಸುಳ್ಯದ ನಿರೀಕ್ಷಣ ಮಂದಿರದಲ್ಲಿ ಮಧ್ಯಾಹ್ನ 2.00 ಗಂಟೆಯಿಂದ 4.00 ಗಂಟೆಯವರೆಗೆ ಸಂಸದ ಕ್ಯಾ. ಚೌಟ ಅವರು ಸಾರ್ವಜನಿಕರ ಭೇಟಿಗೆ ಲಭ್ಯವಿದ್ದು, ಸುಳ್ಯ ತಾಲೂಕಿನ ನಾಗರಿಕರು ತಮ್ಮ ಅಹವಾಲುಗಳನ್ನು ನೇರವಾಗಿ ಸಲ್ಲಿಸಬಹುದಾಗಿದೆ. ಎಂದು ಸಂಸದ ಕ್ಯಾ. ಚೌಟ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಾರ್ವಜನಿಕರ ಭೇಟಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ನಾಳೆ ಸುಳ್ಯದಲ್ಲಿ ಲಭ್ಯ
