ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೊಡಿಕಾಕ್ಕೆ ಸೇರಿರುವ ಚಾಕಟೆಡಿ ನೇಮೋತ್ಸವ ( ಇರ್ವೆರ್ ಉಳ್ಳಾಕುಲು,ರಾಜನ್ ಹಾಗೂ ಪರಿವಾರ ದೈವಗಳ ಕೋಲ) ಜನವರಿ 27ರಂದು ಕರಿಮಜಲಿನಲ್ಲಿ ನಡೆಯಿತು. ಜ.28ರಂದು ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ ನಡೆಯಲಿರುವುದು.
ಜನವರಿ 27ರಂದು ರಾತ್ರಿ 7 ಗಂಟೆಗೆ ಪಾಷಾಣಮೂರ್ತಿ ಅಮ್ಮನವರ ಭಂಡಾರ ತೆಗೆಯಲಾಗುವುದು.ಜನವರಿ 28ರಂದು ಬೆಳಿಗ್ಗೆ ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ ನಡೆದು ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿರುವುದು.
ಚಾಕಟೆಡಿ ನೇಮೋತ್ಸವದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷರು,ಮಾಜಿ ಅಧ್ಯಕ್ಷರು,ಸದಸ್ಯರು,ಜೀರ್ಣೋದ್ಧಾರ ಸಮಿತಿಯವರು,ದೇವಳದ ಸಿಬ್ಬಂದಿಗಳು,ಸೀಮೆಯ ಭಕ್ತರು ಉಪಸ್ಥಿತರಿದ್ದರು.
ತೊಡಿಕಾನ : ಶ್ರದ್ದಾ ಭಕ್ತಿಯಿಂದ ನಡೆದ ಚಾಕಟೆಡಿ ನೇಮೋತ್ಸ,ನಾಳೆ (ಜ.28ಕ್ಕೆ) ಶ್ರೀ ಪಾಷಾಣಮೂರ್ತಿ ಅಮ್ಮನವರ ಕೋಲ!
