ಶಿಕ್ಷಣ ವ್ಯವಸ್ಥೆಯೊಳಗಿನ ಪರೀಕ್ಷೆಗಳು ಜೀವನದ ಅವಿಭಾಜ್ಯ ಅಂಗವೆಂದರಿಯಿರಿ : ಡಾ.ಅನುರಾಧ ಕುರುಂಜಿ

ಶಿಕ್ಷಣ ವ್ಯಕ್ತಿಯ ಬದುಕನ್ನು ರೂಪಿಸುವುದರೊಂದಿಗೆ ಮೌಲ್ಯಯುತ ಜೀವನವನ್ನು ನಿರ್ವಹಿಸಲು ಸಾಧ್ಯವಾಗಬೇಕು. ಆ ನಿಟ್ಟಿನಲ್ಲಿ  ಶಿಕ್ಷಣ ವ್ಯವಸ್ಥೆಯ ಪರೀಕ್ಷೆ ನಿಮ್ಮ ಜೀವನದ ಅವಿಭಾಜ್ಯ ಅಂಗವೆಂದರಿಯಿರಿ. ಆ ಮೂಲಕ ನೀವು ಪಡೆದ ಶಿಕ್ಷಣ ಸಾರ್ಥಕವಾಗಲಿ. ಎಂದು ವ್ಯಕ್ತಿತ್ವ ವಿಕಸನ ತರಬೇತುದಾರರಾದ ಡಾ.  ಅನುರಾಧಾ ಕುರುಂಜಿಯವರು ಅಭಿಪ್ರಾಯ ಪಟ್ಟರು. ಅವರು ಸರ್ಕಾರಿ ಪ್ರೌಢಶಾಲೆ ಎಡಮಂಗಲ ಶಾಲೆಯ ಮುಖ್ಯೋಪಾಧ್ಯಾಯರಾದ ಅಬ್ದುಲ್ ಖಾದರ್ ಅವರ ನೇತೃತ್ವದಲ್ಲಿ  8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪರೀಕ್ಷಾ ತಯಾರಿ ಹಾಗೂ ವೃತ್ತಿ ಮಾರ್ಗದರ್ಶನ ತರಬೇತಿಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ  ಭಾಗವಹಿಸಿ ಮಾತನಾಡುತ್ತಿದ್ದರು.  ವಿದ್ಯಾರ್ಥಿಗಳು ಮುಂದಿನ ಗುರಿಗಳನ್ನು ರೂಪಿಸಿಕೊಳ್ಳುವುದು ಹೇಗೆ? ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪಲು ಹೇಗೆ ಪ್ರಯತ್ನಿಸಬೇಕು? ಎಂಬೆಲ್ಲಾ ವಿಷಯಗಳನ್ನು ಕುರಿತು ಸತತ ಎರಡು ಗಂಟೆಗಳ ಕಾಲ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಹಿರಿಯ ಶಿಕ್ಷಕರಾದ ಆನಂದ ಕೆ ಎಸ್, ಸವಿತಾ, ಪದ್ಮಿನಿ, ಪೊಡಿಯ, ಪವನ  ಮೊದಲಾದವರು ಉಪಸ್ಥಿತರಿದ್ದರು. ಕನ್ನಡ ಶಿಕ್ಷಕರಾದ ಸಂತೋಷ ಎಸ್ ಪಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top