ಡಾ.ಕೆ.ವಿ ರೇಣುಕಾಪ್ರಸಾದ್ ಧರ್ಮದರ್ಶಿಯಾಗಿರುವ ಕುರುಂಜಿ ಕಾಂತಮಂಗಲ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ದೈವಗಳ ವಾರ್ಷಿಕ ಉತ್ಸವ ಶ್ರದ್ದಾ ಭಕ್ತಿಯಿಂದ ವೈಭಯುತವಾಗಿ ಜ. 31ರಂದು ನಡೆಯಿತು.
ಬೆಳಿಗ್ಗೆ ನವಗ್ರಹ ಹೋಮ, ಚಂಡಿಕಾ ಹೋಮ ನಡೆದು ಪೂರ್ಣಾಹುತಿ ನಂತರ ಮಹಾಮಂಗಳಾರತಿ,ಪ್ರಸಾದ ವಿತರಣೆಯಾಗಿ ಮಧ್ಯಾಹ್ನ 1.00ರಿಂದ ಅನ್ನಸಂತರ್ಪಣೆ ನಡೆಯಿತು. ಸಾಯಂಕಾಲ ಗಂಟೆ 5.00ರಿಂದ ರಂಗ ಪೂಜೆ, ಪ್ರಸನ್ನ ಪೂಜೆ, ಪ್ರಾರ್ಥನೆ,ಪ್ರಸಾದ ವಿತರಣೆ ನಡೆಯಿತು.ಸಾವಿರಾರು ಭಕ್ತಾಭಿಮಾನಿಗಳು ಭಾಗವಹಿಸಿ ಶ್ರೀ ದೇವಿಯ ಗಂಧ ಪ್ರಸಾದವನ್ನು ಸ್ವೀಕರಿಸಿದರು.
ಈ ಬಾರಿ ಗುತ್ಯಮ್ಮ ದೇವಿ ಕ್ಷೇತ್ರಕ್ಕೆ ಡಾ.ಕೆ.ವಿ.ಚಿದಾನಂದ ಹಾಗೂ ಶ್ರೀಮತಿ ಶೋಭಾ ಚಿದಾನಂದರು ಆಗಮಿಸಿದರು. ಅವರು ಬರುತ್ತಿದ್ದಂತೆ ಅವರನ್ನು ಸಹೋದರ ಡಾ.ರೇಣುಕಾಪ್ರಸಾದ್ ಕೆ.ವಿ. ಯವರ ಆಡಳಿತದ ಕಾಲೇಜಿನ ಸಿಬ್ಬಂದಿಗಳು ಸ್ವಾಗತಿಸಿದರು. ಈ ವೇಳೆ ಪೂಜಾ ಕಾರ್ಯದಲ್ಲಿ ನಿರತರಾಗಿದ್ದ ಡಾ.ರೇಣುಕಾಪ್ರಸಾದ್ ರವರು ಡಾ.ಚಿದಾನಂದರ ಬಳಿ ಹೋಗಿ ಅವರ ಕಾಲಿಗೆರಗಿ ಆಶೀರ್ವಾದ ಪಡೆದರು. ಬಳಿಕ ಅತ್ತಿಗೆ ಶೋಭಾ ಚಿದಾನಂದರ ಕಾಲಿಗೆರಗಿ ಆಶೀರ್ವಾದವನ್ನು ರೇಣುಕಾಪ್ರಸಾದ್ ದಂಪತಿ ಪಡೆದರು.
ಬಳಿಕ ಸಹೋದರಿಬ್ಬರೂ ಪೂಜಾ ಕಾರ್ಯ ನಡೆಸಿದರು.
ಕಾಂತಮಂಗಲ : ಶ್ರದ್ಧಾ ಭಕ್ತಿಯಿಂದ ನಡೆದ ಗುತ್ಯಮ್ಮ ದೇವಿಯ ವಾರ್ಷಿಕೋತ್ಸವ,ಮತ್ತೆ ಒಂದಾದ ಡಾ.ಕೆ.ವಿ ಚಿದಾನಂದ ಮತ್ತು ಡಾ.ಕೆ.ವಿ ರೇಣುಕಾಪ್ರಸಾದ್ ಸಹೋದರರು!
