ಅಜ್ಜಾವರ ಗ್ರಾಮದ ಪಡ್ಡಂಬೈಲು ನಲ್ಲಿ ಮನೆಯ ಅಂಗಳಕ್ಕೆ ಬುಧವಾರ ರಾತ್ರಿ ಚಿರತೆಯೊಂದು ಬಂದು ಸಾಕು ನಾಯಿ ಕೊಂದು ತಿಂದಿದೆ.
ನಿವೃತ್ತ ಬಿಎಸ್ ಎನ್ ಎಲ್ ಉದ್ಯೋಗಿ ಶಂಕರ ಪಾಟಾಳಿಯವರ ಅಂಗಳದಲ್ಲಿ ಫೆ.4ರಂದು ರಾತ್ರಿ ಸುಮಾರು 1 ಗಂಟೆ 40 ನಿಮಿಷದಿಂದ 1 ಗಂಟೆ 42 ನಿಮಿಷದ ಒಳಗೆ ಚಿರತೆಯೊಂದು ನಾಯಿ ಒಂದನ್ನು ಹಿಡಿದು ಅಂಗಳದಲ್ಲೇ ಕೊಂದು ತಿಂದು ಮುಗಿಸುತಿದ್ದ ವೇಳೆ ಮನೆಯ ಇನ್ನೊಂದು ನಾಯಿ ಬೊಗಳುವ ಶಬ್ದ ಕೇಳಿ ಮನೆಯವರು ಹೊರಗೆ ಬರುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದೆ ನಂತರ ಮುಂಜಾನೆ ಸುಮಾರು 5 ಗಂಟೆ 25 ನಿಮಿಷಕ್ಕೆ ಎರಡನೇ ನಾಯಿಯನ್ನು ಆಕ್ರಮಿಸಿ ಕೊಂದು ಹಾಕಿದೆ ಆ ಸಂದರ್ಭದಲ್ಲಿ ಮನೆಯವರು ಎಚ್ಚರಗೊಂಡು ಲೈಟ್ ಹಾಕುವ ಸಂದರ್ಭದಲ್ಲಿ ಅಲ್ಲಿಂದ ಪರಾರಿಯಾಗಿದೆ ಆ ರೀತಿಯಲ್ಲಿ ನಿನ್ನೆ ಒಂದೇ ರಾತ್ರಿ ಬೇರೆ ಬೇರೆ ಸಮಯಗಳಲ್ಲಿ ಎರಡು ಬಾರಿ ಅಂಗಳದಲ್ಲಿ ಸಂಚಾರ ನಡೆಸಿದ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಮೇಲಿನ ವೀಡಿಯೋದಲ್ಲಿ ಕಾಣಬಹುದಾಗಿದೆ