ಮರಾಟಿಗರು ಇನ್ನಷ್ಟು ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು.ಮರಾಟಿ
ಭಾಷೆಯನ್ನು ಮಾತನಾಡಿ,ಭಾಷೆಯನ್ನು ಬೆಳೆಸಬೇಕು ಎಂದು ಸುಳ್ಯ ಪೋಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಹೇಳಿದರು.
ಅವರು ಇಂದು ಗಿರಿದರ್ಶಿನಿ ಸಭಾಭವನದ ವಠಾರದಲ್ಲಿ ನಡೆದ ಮರಾಟಿ ಸಮಾಜ ಬಾಂಧವರ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ ಮಾಡಿ ಮಾತನಾಡಿದರು.
ಇಂತಹ ಕ್ರೀಡಾಕೂಟಗಳ ಸಂಘಟನೆಯಿಂದ ಮರಾಟಿ ಸಮಾಜದ ಸಂಘಟನೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಮರಾಟಿ ಮಹಿಳಾ ವೇದಿಕೆ ಮತ್ತು ಮರಾಟಿ ಯುವ ವೇದಿಕೆಯ ಆಶ್ರಯದಲ್ಲಿ ಕ್ರೀಡಾಕೂಟ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮರಾಟಿ ಸಮಾಜದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಅಜ್ಜಾವರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನ.ಪಂ.ಉಪಾಧ್ಯಕ್ಷ ಬುದ್ಧ ನಾಯ್ಕ್ ಭಾಗವಹಿಸಿದರು. ಸ್ಥಾಪಕಾಧ್ಯಕ್ಷ ಜಿ.ದೇವಪ್ಪ ನಾಯ್ಕ್ ಹೊನ್ನೇಡಿ, ಗೌರವಾಧ್ಯಕ್ಷ ಜನಾರ್ದನ ಬಿ.ಕುರುಂಜಿಭಾಗ್ ಮಾತನಾಡಿದರು. ವೇದಿಕೆಯಲ್ಲಿ ಮಹಿಳಾ ವೇದಿಕೆ ಅಧ್ಯಕ್ಷೆ ರೇವತಿ ದೊಡ್ಡೇರಿ, ಯುವ ವೇದಿಕೆ ಅಧ್ಯಕ್ಷ ಉದಯಕುಮಾರ್ ಮಾಣಿಬೆಟ್ಟು, ಮರಾಟಿ ಸಮಾಜ ಸೇವಾ ಸಂಘದ ಕಾರ್ಯದರ್ಶಿ ರಮೇಶ್ ನೀರಬಿದಿರೆ, ಕೋಶಾಧಿಕಾರಿ ಐತ್ತಪ್ಪ ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ರಮೇಶ್ ನೀರಬಿದಿರೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಗಾಯಕ ಸುಭಾಸ್ ಡಿ.ಕೆ.ಪ್ರಾರ್ಥಿಸಿದರು.ಕಾರ್ಯಕಾರಿಸಮಿತಿ ಸದಸ್ಯರಾದ ಭವಾನಿಶಂಕರ ಕಲ್ಮಡ್ಕ ವಂದಿಸಿದರು. ಈಶ್ವರ ವಾರಣಾಶಿ ಕಾರ್ಯಕ್ರಮ ನಿರೂಪಿಸಿದರು.
ಸುಳ್ಯದಲ್ಲಿ ಮರಾಟಿ ಸಮಾಜ ಬಾಂಧವರ ವಾರ್ಷಿಕ ಕ್ರೀಡಾಕೂಟ, ಮರಾಟಿ ಬಾಂಧವರು ಸಂಘಟಿತರಾಗಬೇಕು- ತಿಮ್ಮಪ್ಪ ನಾಯ್ಕ್
