ಕೊಡಿಯಾಲಬೈಲು ; ಮನೋಶಕ್ತಿ ಕಾರ್ಯಗಾರ ಉದ್ಘಾಟನೆ

ಉಪಾಸನ ಫೌಂಡೇಶನ್ ನ ಉಪಾಸಕರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಫೌಂಡೇಶನ್ ಮುಖ್ಯಸ್ಥ ಸದ್ಗುರುಶ್ರೀ ರಾಮರವರ ಮಾರ್ಗದರ್ಶನದಲ್ಲಿ ಸುಳ್ಯದ ಗೌಡ ಸಮುದಾಯ ಭವನದಲ್ಲಿ ಮನೋಶಕ್ತಿ ಕಾರ್ಯಗಾರ ಫೆ. 9ರಂದು ನಡೆಯಿತು.
ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಡಿ. ವಿ. ಲೀಲಾಧರ್ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು‌.ಬಳಿಕ ಮಾತನಾಡಿದ ಅವರು ನಮ್ಮ ಹೃದಯ ಮತ್ತು ಮನಸ್ಸು ಶಾಂತವಾಗಿರಲು ಇಂತಹ ಕಾರ್ಯಕ್ರಮ ಸಹಕಾರಿಯಾಗಬಲ್ಲದು” ಶುಭ ಹಾರೈಸಿದರು.ಉಪಾಸನ ಫೌಂಡೇಶನ್ ನ ಮುಖ್ಯಸ್ಥ ಸದ್ಗುರುಶ್ರೀ ರಾಮರವರು ಮಾತನಾಡಿ, “ನಮ್ಮ ಮನಸ್ಸೇ ಎಲ್ಲವೂ ಆಗಿದೆ. ಜೀವನ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡಲು ಮನಸ್ಸೇ ಶತ್ರು ಆಗಬಾರದು, ಮನಸ್ಸಿನ ಚಿತ್ತವನ್ನು ಅರ್ಥ ಮಾಡಿಕೊಂಡರೆ, ಮನಸ್ಸನ್ನು ಮಿತ್ರನನ್ನಾಗಿಸಿದರೆ ಆಗ ಏನನ್ನು ಸಾಧಿಸಬಹುದು” ಎಂದು ಹಿತವಚನ ನೀಡಿದರು.
ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಪ್ರಗತಿಪರ ಕೃಷಿಕ ನೂಜಾಲು ಪದ್ಮನಾಭ ಗೌಡ, ಅಡ್ವಕೇಟ್ ರಾಮಣ್ಣ ಗೌಡ ವಿಟ್ಲ ಕಾರ್ಯಕ್ರಮದ ಸಂಘಟಕ, ಶ್ರೀ ಉಪಾಸಕ ಧರ್ಮತೇಜ ಎನ್. ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಮತಿ ಲತಾಶ್ರೀ ಸುಪ್ರೀತ್ ಮೊಂಟಡ್ಕ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಉಪಾಸಕರು ಕಾರ್ಯಕ್ರಮದಲ್ಲಿ ಸಹಕರಿಸಿದರು.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top