ಅರಂತೋಡು ತೊಡಿಕಾನ ಪಟ್ಟಿ ಭಾಗಮಂಡಲ ಅಂತರ್ ಜಿಲ್ಲಾ ರಸ್ತೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಭರವಸೆ

ತೊಡಿಕಾನ : ಅರಂತೋಡು ತೊಡಿಕಾನ ಪಟ್ಟಿ ಭಾಗಮಂಡಲ ರಸ್ತೆ ಅಭಿವೃದ್ಧಿ ಅತೀ ಅಗತ್ಯವಿದ್ದು ಈ ರಸ್ತೆ ಅಭಿವೃದ್ಧಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎಸ್.ಎಸ್ ಪೊನ್ನಣ್ಣ ಭರವಸೆ ನೀಡಿದ್ದಾರೆ.
ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಆಗಮಿಸಿ ದೇವಳದ ಅಕ್ಷಯ ಮಂದಿರದಲ್ಲಿ ಮಂಗಳವಾರ ಅರಂತೋಡು ತೊಡಿಕಾನ ಪಟ್ಟಿ ಭಾಗಮಂಡಲ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿ ಇದರ ನೇತ್ರತ್ವದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
ಅರಂತೋಡು ತೊಡಿಕಾನ ಪಟ್ಟಿ ಭಾಗಮಂಡಲ ರಸ್ತೆ ಅತೀ ಪುರಾತನ ರಸ್ತೆಯಾಗಿದ್ದು ಇದನ್ನು ಅಭಿವೃದ್ಧಿ ಪಡಿಸಲು ಕಾನೂನಿನಲ್ಲಿ ಅವಕಾಶ ಇದೆ.ರಸ್ತೆ ಅಭಿವೃದ್ಧಿ ಮಾಡಲು ಬಜೆಟಿನಲ್ಲಿ ಅನುದಾನ ಇಡಲು ಮುಖ್ಯ ಮಂತ್ರಿಗಳ ಗಮನಕ್ಕೆ ತರುವೆ.ಆದರೆ ಈ ಬಾರಿಯ ಬಜೆಟ್ ನಲ್ಲಿ ಅನುದಾನ ಇರಿಸುತ್ತಾರೆ ಎಂಬ ಪೂರ್ಣ ಭರವಸೆ ನೀಡಲ್ಲ.ರಸ್ತೆ ಅಭಿವೃದ್ಧಿಗೆ ಕೇಂದ್ರ ಸರಕಾರದ ಅನುಮೋದನೆ ಬೇಕಾಗುತ್ತದೆ.ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಅರಣ್ಯ ಅಧಿಕಾರಿಗಳ ಸಭೆ ಕರೆಯಲಾವುವುದು.ರಸ್ತೆ ಅಭಿವೃದ್ಧಿ ಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು.
ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅರಂತೋಡು ತೊಡಿಕಾನ ಪಟ್ಟಿ ಭಾಗಮಂಡಲ ರಸ್ತೆ ಅಭಿವೃದ್ಧಿ ಬಹಳ ಅಗತ್ಯ ಇದೆ.ನಾನು ಮತ್ತು ಪೊನ್ನಣ್ಣ ಇಬ್ಬರು ಹೊಸ ಶಾಸಕರು ಅನುಭವ ಕಡಿಮೆ ಅನುಭವಿಗಳ ಸಹಕಾರ ಪಡೆದುಕೊಂಡು ರಸ್ತೆ ಅಭಿವೃದ್ಧಿ ಮಾಡಲು ಪೂರ್ಣ ಪ್ರಮಾಣದ ಸಹಕಾರ ಮಾಡುವೆ ಎಂದು ಹೇಳಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ,ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ,ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಯು.ಎಂ ಮಾತನಾಡಿದರು.
ರಸ್ತೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಸ್ಚಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯ ಕಾನೂನು ಸಲಹೆಗಾರ ದೀಪಕ್ ಕುತ್ತಮೊಟ್ಟೆ ವಂದಿಸಿದರು.
ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಶಾಸಕರಿಬ್ಬರಿಗೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವರ ಪ್ರಸಾದ ನೀಡಿ‌ ಗೌರವಾರ್ಪಣೆ ಮಾಡಲಾಯಿತು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸಂಪಾಜೆ ಗ್ರಾ.ಪಂ. ಅಧ್ಯಕ್ಷೆ ಸುಮತಿ ಶಕ್ತಿವೇಲು,ಕರಿಕೆ ಗ್ರಾ.ಪಂ. ಅಧ್ಯಕ್ಷ ಎನ್.ಬಾಲಚಂದ್ರನ್ ನಾಯರ್‌,
ಪಿ.ಸಿ.ಜಯರಾಮ, ಹರೀಶ್ ಕಂಜಿಪಿಲಿ, ಟಿ.ಎಂ.ಶಹೀದ್ ತೆಕ್ಕಿಲ್, ಪಿ.ಎಸ್.ಗಂಗಾಧರ, ರಮಾನಾಥ್ ಕರಿಕೆ, ಕೆ.ಆರ್.ಗಂಗಾಧರ, ಇಸ್ಮಾಯಿಲ್ ನಾಪೊಕ್ಲು, ದಯಾನಂದ ಕುರುಂಜಿ, ಭಾರತಿ ಪುರುಶೋತ್ತಮ ಉಳುವಾರು,ಅರಂತೋಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಭವಾನಿ ಚಿಟ್ಟನ್ನೂರು, ಮಾಜಿ ಅಧ್ಯಕ್ಷೆ ಹರಿಣಿ ದೇರಾಜೆ, ಪ್ರಭಾಕರ ರೈ ಎನ್‌.ಎ.ರಾಮಚಂದ್ರ ಕೇಶವ ಕೊಳಲುಮೂಲೆ, ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಆನಂದ ಕಲ್ಲಗದ್ದೆ ಖಜಾಂಜಿ ವಿಜೇತ್ ಮರುವಳ,ಮನು ಪೆರುಮುಂಡ,ವಸಂತ ಅಮಚೂರು, ಜಿ.ಕೆ ಹಮೀದ್ತ್ ಸುಬೋದ್ ಶೆಟ್ಟಿ ಮೇನಾಲ,ತೀರ್ಥರಾಮ ಪರ್ನೋಜಿ,ಸತ್ಯಪ್ರಸಾದ್ ಆಡಿಂಜ ,ಚಿದಾನಂದ ಕಾಡುಪಂಜ,ರವೀಂದ್ರ ಪೂಜಾರಿ,ತಿಮ್ಮಯ್ಯ ಮೆತ್ತಡ್ಕ ಇತರರು ಉಪಸ್ಥಿತರಿದ್ದರು.ಸಭೆಗೆ ಮೊದಲು ಪೊನ್ನಣ್ಣ ಅವರು ಭಾಗಮಂಡಲ,ಪಟ್ಟಿ ತೊಡಿಕಾನ ರಸ್ತೆಯ ವೀಕ್ಷಣೆ ಮಾಡಿದರು.

Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top