ಅರಂತೋಡು ಭಾಗದಲ್ಲಿಯು ವಿದ್ಯುತ್ ಸಮಸ್ಯೆ ತೀವ್ರಗೊಂಡಿದ್ದು ರಾತ್ರಿ ಹೊತ್ತಿನಲ್ಲಿ ಇರುವುದಿಲ್ಲ ದಿನ ನಿತ್ಯ ಟ್ರಿಪ್ ಆಗುತ್ತಿರುವುದರಿಂದ ಗ್ರಾಮ ಪಂಚಾಯತ್ ನ ಸಾರ್ವಜನಿಕ ಕುಡಿಯುವ ನೀರಿಗೆ ಜನ ಪರದಾಡುತ್ತಿದ್ದಾರೆ, ಅಲ್ಲದೆ ಕೃಷಿಕರಿಗೆ, ಬೆಳಗ್ಗಿನ ಹೊತ್ತು ಅಡಚಣೆಯಾಗುತ್ತಿರುವುದರಿಂದ ನೌಕರಿಗೆ ತೆರಳುತ್ತಿರುವವರಿಗೆ ತುಂಬಾ ತೊಂದರೆಯಾಗಿದೆ. ದಿನ ಪತ್ರಿಕೆಯಲ್ಲಿ ಈ ಬಾರಿ ಲೋಡ ಶೆಡ್ ಇಲ್ಲ ಎಂದು ತಿಳಿಸಿದರು ಈ ಭಾಗದಲ್ಲಿ ದಿನಾಲು ಲೋಡ್ ಶೆಡ್ಡಿಂಗ್ ಇರುತ್ತದೆ. ಆದುದರಿಂದ ಮೆಸ್ಕಾಂ ಇಲಾಖೆ ಈ ಭಾಗಕ್ಕೆ ಉತ್ತಮ ಗುಣಮಟ್ಟದ ವಿದ್ಯುತ್ ಸರಬರಾಜಿಗೆ ಕ್ರಮ ಕೈಗೊಳ್ಳ ಬೇಕೆಂದು ಕೆ.ಡಿ.ಪಿ ಸದಸ್ಯ ಅಶ್ರಫ್ ಗುಂಡಿ ಆಗ್ರಹಿಸಿದ್ದಾರೆ.
ಅರಂತೋಡಿನಲ್ಲಿ ತೀವ್ರಗೊಂಡ ವಿದ್ಯುತ್ ಸಮಸ್ಯೆ ಕುಡಿಯುವ ನೀರಿಗೆ ಪರದಾಟ!
