ರಾಜ್ಯದಲ್ಲಿ 25% ಸರಕಾರಿ ಶಾಲೆಗಳಿಗೆ ಬೀಗ ?

ಸರಕಾರಿ ಶಾಲೆಗಳ ಇಷ್ಟ ಪಡುವವರಿಗೆ ಆತಂಕವೊಂದು ಎದುರಾಗಿದೆ‌.ರಾಜ್ಯ ಸರಕಾರ ದಾಖಲಾತಿ ಕಡಿಮೆ ಇರುವ ಪ್ರಾಥಮಿಕ ಶಾಲೆಗಳ ವಿಲೀನಕ್ಕೆ ಹೆಜ್ಜೆಯಿಟ್ಟಿದೆ. ಇದರಿಂದ ರಾಜ್ಯದ ಆರು ಸಾವಿರಕ್ಕೂ ಹೆಚ್ಚು ಪ್ರಾಥಮಿಕ ಶಾಲೆಗಳಿಗೆ ಕುತ್ತು ಎದುರಾಗಿದೆ.
ಮೊದಲ ಹಂತವಾಗಿ 8 ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಗಳನ್ನು ವಿಲೀನ ಮಾಡಿ ಮಾದರಿ ಶಾಲೆ ನಡೆಸುವ ಕಾರ್ಯಯೋಜನೆ ನಡೆಯುತ್ತಿದೆ. ಇದರಲ್ಲಿ ಶಿಕ್ಷಣ ಸಚಿವರ ಹುಟ್ಟೂರು ಶಿವಮೊಗ್ಗ ಜಿಲ್ಲೆ ಕೂಡ ಸೇರಿದೆ. ಕಾರವಾರ, ಶಿರಸಿ ಶೈಕ್ಷಣಿಕ ಜಿಲ್ಲೆಗಳನ್ನೂ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಪೈಕಿ ಕೆಲ ಜಿಲ್ಲೆಗಳಲ್ಲಿ ಮಾದರಿ ಶಾಲೆಗಳನ್ನು ಗುರುತಿಸಿ. ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ.
ಇನ್ನೂ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
10ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಹಾಗಾಗಿ ಸಮೀಪದ ಶಾಲೆಗಳಲ್ಲಿ ವಿಲೀನ ಮಾಡಬೇಕು ಎಂದು ಶಾಲಾ ಸುಧಾರಣಾ ಆಯೋಗ ಹಿಂದಿನ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಅಂದಿನಿಂದ ಈ ಪ್ರಸ್ತಾವದ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಹಾಗಿದ್ದರೂ, ವಾಹನ ವ್ಯವಸ್ಥೆ ಮೂಲಕ ದೂರದ ಹಳ್ಳಿ ಮಕ್ಕಳನ್ನು ಶಾಲೆಗೆ ಕರೆತರುತ್ತೇವೆ ಎಂದು ರಾಜ್ಯ ಸರಕಾರ ಪ್ರಯೋಗಕ್ಕೆ ಕೈ ಹಾಕಿದೆ. ಇದರಿಂದ ನಾವಿರಾರು ಸರಕಾರಿ ಶಾಲೆಗಳು ಮುಚ್ಚಲಿವೆ.
ಮಾದರಿ ಶಾಲೆ ಆರಂಭಿಸುವುದು. ಸುತ್ತಲಿನ ಶಾಲೆಗಳ ಮಕ್ಕಳನ್ನು ಆ ಶಾಲೆಗೆ ಕರೆತರುವ ಮೂಲಕ ಗುಣಮಟ್ಟದ ಶಿಕ್ಷಣ ನೀಡು ವುದು. ಇದರಿಂದ ಆರ್ಥಿಕ ಹೊರೆ ಕಡಿಮೆ ಯಾಗುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುತ್ತದೆ ಎನ್ನುವುದು ಅಧಿಕಾರಿಗಳ ವಾದ.
ಆಯೋಗ ಪ್ರಸ್ತಾವ ಸಲ್ಲಿಸುವ ವೇಳೆ ವಿಲೀನಕ್ಕೆ 10ಕ್ಕಿಂತ ಕಡಿಮೆ ದಾಖಲಾತಿ ಇರುವ 3,457 ಸರಕಾರಿ ಪ್ರಾಥಮಿಕ ಶಾಲೆ ಗುರುತಾಗಿದ್ದವು. ಇತ್ತೀಚೆಗೆ ಬಿಡುಗಡೆಯಾದ ವರದಿ ಪ್ರಕಾರ ರಾಜ್ಯದಲ್ಲಿ ಕಡಿಮೆ ದಾಖಲಾತಿ ಇರುವ ಪ್ರಾಥಮಿಕ ಶಾಲೆಗಳ ಸಂಖ್ಯೆ ಆರು ಸಾನಿರಕ್ಕೆ ತಲುಪಿದೆ. ಎಲ್ಲವೂ ವಿಲೀನವಾದರೆ, ರಾಜ್ಯದಲ್ಲಿ ಶೇ.25ರಷ್ಟು ಸರಕಾರಿ ಶಾಲೆಗಳಿಗೆ ಬೀಗ ಬೀಳಲಿದೆ. ಅದರಿಂದ 50 ಸಾವಿರಕ್ಕೂ ಅಧಿಕ ಮಕ್ಕಳ ಭವಿಷ್ಯ ಆತಂಕಕ್ಕೆ ಒಳಪಡಲಿದೆ.

Ad Widget . Ad Widget . Ad Widget . Ad Widget . Ad Widget . Ad Widget . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top