ರಾಜ್ಯ ಬಿಜೆಪಿಯಲ್ಲಿ ಕೆಲವು ದಿನಗಳಿಂದ ಹೊಸ ಬೆಳವಣಿಗೆಗಳು ನಡೆಯುತ್ತಿವೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಪಕ್ಷದಲ್ಲಿ ಗುಂಪುಗಳು ಸೃಷ್ಟಿ ಆಗಿರುವುದನ್ನು ಸರಿಪಡಿಸಬೇಕು. ಅಧ್ಯಕ್ಷರ ನೇಮಕ ಮಾಡುವುದಕ್ಕಿಂತಲೂ ನಮ್ಮ ಮನಸ್ಸುಗಳನ್ನು ಸರಿ ಮಾಡುವ ಕೆಲಸವನ್ನು ಹಿರಿಯರು ಮಾಡಲೇ ಬೇಕು ಎಂದು ಅವರು ಹೇಳಿದರು.
ವಿಶ್ವವಿದ್ಯಾ ನಿಲಯ ಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು, ಅದು ಯಾರ ಕಾಲಘಟ್ಟದಲ್ಲಿ ಅನುಷ್ಠಾನ ಆಗಿದೆಯೋ ಅವರು ಮಾಡಿದ ಸಣ್ಣಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿ ಮುಂದು ವರಿಸಬೇಕು. ಮುಚ್ಚುವುದು ಪರಿಹಾ ರವಲ್ಲ ಎಂದು ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಹೇಳಿದರು.
ಅವರು ಸುಳ್ಯದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಅಂದು ಪೂರ್ವಸಿದ್ಧತೆ ಇಲ್ಲದೆ, ಎಲ್ಲ ವಿಷಯಗಳನ್ನು ಸರಿಯಾಗಿ ಅಧ್ಯ ಯನ ಮಾಡದೆ, ಅಗತ್ಯ ಆರ್ಥಿಕ ಸವಲತ್ತು – ಸಹಾಯಗಳನ್ನು ಕೊಡದೆ ಒಂಬತ್ತು ಹೊಸ ಸರಕಾರಿ ವಿವಿಗಳನ್ನು ಮಾಡಿರುವುದರಿಂದ ವಿವಿಗಳು ಸರಿ ಯಾಗಿ ಕೆಲಸ ಮಾಡಲು ಸಾಧ್ಯವಾಗಿಲ್ಲ. ಆದ್ದರಿಂದ ಆ ಎಲ್ಲ ಸಮಸ್ಯೆಗಳನ್ನು ಸರಿಮಾಡಿ ಅದಕ್ಕೆ ಆರ್ಥಿಕ ಸಹಕಾರ ಕೊಡಬೇಕು ಎಂದರು.
ಕೆಲವು ವಿವಿಗಳ ಸ್ಥಿತಿ ಇನ್ನಷ್ಟು ಕಂಗಾಲಾಗಿದೆ. ಹೊಸ ವಿಶ್ವವಿದ್ಯಾನಿಲಯಗಳನ್ನು ಪ್ರಾರಂಭಿಸುವ ಮೊದಲು ತಜ್ಞರ ಸಮಿತಿ ರಚಿಸಬೇಕಿತ್ತು. ಅದನ್ನು ನಮ್ಮ ಸರಕಾರ ಮಾಡಿಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ಕೇಂದ್ರದಿಂದ ಏನೆಲ್ಲ ಸಹಕಾರ ಬೇಕೋ ಅದನ್ನೆಲ್ಲ ಕೊಡಿಸುವ ಪ್ರಯತ್ನವನ್ನು ನಾವು ಮಾಡುತ್ತೇವೆ ಎಂದು ಡಿವಿಎಸ್ ಹೇಳಿದರು.
ರಾಜ್ಯ ಬಿಜೆಪಿಯ ಗುಂಪುಗಾರಿಕೆ ನಿಯಂತ್ರಿಸುವ ಅಗತ್ಯ ಇದೆ: ಡಿ. ವಿ ಸದಾನಂದ ಗೌಡ
