ಅಜ್ಜಾವರ : ಸ್ವಾಮೀಜಿ ಶ್ರೀ ಯೋಗೇಶ್ವರನಾಂದ ಸರಸ್ವತಿಯವರ ಕ್ರತಿ ವಸುದೈವಂ ಕುಟುಂಬಕಂ ಮತ್ತು ಕಲಿಕೆಯ ಮಹಿಮೆ ಬಿಡುಗಡೆ

ಸುಳ್ಯತಾಲೂಕಿನ ಅಜ್ಜಾವರ ಗ್ರಾಮದ ಚೈತನ್ಯ ಸೇವಾಶ್ರಮದಲ್ಲಿ ಶಿವರಾತ್ರಿ ಪ್ರಯುಕ್ತ ಶಿವೂಜೆ,ಗುರುಪೂಜೆ,ಗಣತಿಪೂಜೆ ಪುಸ್ತಕ ಬಿಡುಗಡೆ,ಭಜನಾ ಸತ್ಸಂಗ ಕಾರ್ಯಕ್ರಮ ಫೆ.26ರಂದು ನಡೆಯಿತು.ಪೆರಾಜೆ ಜ್ಯೋತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ನಾಗರಾಜ್ ಅವರು ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿಯವರ ಕ್ರತಿ ವಸುದೈವ ಕುಟುಂಬಕಂ ಮತ್ತು ಕಲಿಕೆಯ ಮಹಿಮೆಯನ್ನು ಬಿಡುಗಡೆಗೊಳಿಸಿದರು.ಬಳಿಕ ಮಾತನಾಡಿದ ಅವರು ಸ್ವಾಮೀಜಿಯವರು ಪುಸ್ತಕದಲ್ಲಿ ಬರೆದಿರುವಂತೆ ನಾವೇಲ್ಲರೂ ಒಂದೆ.ಒಂದೆ ಕುಟುಂಬದವರಂತೆ ಬದುಕಿ ಬಾಳೋಣ ಎಂದು ಹೇಳಿದರು.ಪ್ರೊಫೆಸರ್ ಅನಿಲ್ ಬಿ.ವಿ ಮಾತನಾಡಿ ಜೀವನದ ಬದುಕಿನ ಜಂಜಾಟದಲ್ಲಿ ಕಷ್ಟ ಸುಖಗಳು ಸಹಜ.
.ಜೀವನದಲ್ಲಿ ಕಷ್ಟಗಳ‌ನ್ನು ಮೀರಿ ನಿಂತು ಬದುಕು ಸಾಗಿಸಿದ್ದಾಗ ಜೀವನಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.
ಸ್ವಾಮೀಜಿ‌ ಶ್ರೀ ಯೋಗೇಶ್ವರನಾಂದ ಸರಸ್ವತಿಯವರು ಮಾತನಾಡಿ ನಾವು ಸಮಾಜದಲ್ಲಿ ಸೋತವರಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡಬೇಕು.ಅದನ್ನು ದೇವರು ಮೆಚ್ಚುತ್ತಾನೆ ಎಂದು ಹೇಳಿದರು.
ಸುಳ್ಯ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ.ಹರ್ಷವರ್ಧನ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಆಶ್ರಮದ ಟ್ರಸ್ಟಿ ಪ್ರಣವಿ ಸ್ವಾಗತಿಸಿದರು.ಶಿಕ್ಷಕಿ ಸುನಂದ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top