ಅಡಿಕೆ ತೋಟದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ಪುತ್ತೂರಿನ ಪಾಂಗಳಾಯ ಎಂಬಲ್ಲಿಂದ ಫೆ.26ರಂದು ವರದಿಯಾಗಿದೆ.
ಸುಮಾರು 45 ವರ್ಷ ವಯಸ್ಸಿನ ವ್ಯಕ್ತಿಯ ಶವ ಪತ್ತೆಯಾಗಿದ್ದು ಅಡಿಕೆಯ ಮರವೊಂದು ಅರ್ಧದಲ್ಲೆ ತುಂಡಾಗಿ ಶವದ ಸಮೀಪ ಪತ್ತೆಯಾಗಿದೆ. ಅಡಿಕೆ ಕದಿಯಲು ಬಂದು ಅಡಿಕೆ ಮರದಿಂದ ಬಿದ್ದು ಸತ್ತಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.!
ಅಪಚಿತ ವ್ಯಕ್ತಿಯ ಶವ ಪತ್ತೆ
