ಅರಂತೋಡು ಗ್ರಾಮದ ಅಂಗಡಿಮಜಲು ಮತ್ತು ಕುಲ್ಟಾರು ಎಂಬಲ್ಲಿ ಕಿಂಡಿ ಆಣೆಕಟ್ಟು ನಿರ್ಮಿಸಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಶಿವ ಪ್ರಸನ್ನ ಫೆ. 28 ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಳೆದ ಹಲವಾರು ವರ್ಷಗಳಿಂದ ಬೇಸಿಗೆ ಸಮಯದಲ್ಲಿ ಅರಂತೋಡಿನ ಬಲ್ನಾಡು ಹೊಳೆಯಲ್ಲಿ ನೀರಿನ ಹರಿವು ನಿಂತು ಹೋಗುತಿತ್ತು.ಹೊಳೆಯ ನೀರನ್ನು ಅವಲಂಬಿಸಿ ಕೃಷಿ ಮಾಡುವ ಕೃಷಿಕರು ನೀರಿಲ್ಲದೆ ಬಾರಿ ಸಂಕಷ್ಟ ಅನುಭವಿಸುತ್ತಿದ್ದರು. ಈ ಹಿನ್ನಲೆ ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತ ಮೊಟ್ಟೆ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆಯವರು ಕೃಷಿಕರ ಪರವಾಗಿ ಸುಳ್ಯ ಶಾಸಕರಿಗೆ ಮನವಿಯನ್ನು ನೀಡಿದ್ದರು. ಈ ಮನವಿಯ ಮೇರೆಗೆ ಶಾಸಕರು ಅಧಿಕಾರಿಗಳ ಜೊತೆ ಮಾತನಾಡಿ ಅಂಗಡಿಮಜಲು ಮತ್ತು ಕುಲ್ಟಾರು ಎಂಬಲ್ಲಿ ಕಿಂಡಿ ಆಣೆಕಟ್ಟು ನಿರ್ಮಿಸಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡ ಆರಂತೋಡು ಸಹಕಾರಿ ಸಂಘದ ಸಮೃದ್ಧಿ ಮಾರ್ಟ್ ನ ಅಧ್ಯಕ್ಷ ದಯಾನಂದ ಕುರುಂಜಿ, ಪಾಪ್ಯುಲರ್ ಎಜುಕೇಶನ್ ಸೊಸೈಟಿ ಸಂಚಾಲಕರಾದ ಕೆ ಆರ್ ಗಂಗಾಧರ್, ವಿಶ್ವನಾಥ್ ದುಗ್ಗಳ ಹಾಗೂ ಇಲಾಖೆಯ ಅಧಿಕಾರಿಗಳು-ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಶಾಸಕಿ ಭಾಗೀರಥಿ ಮುರುಳ್ಯ ಕಿಂಡಿ ಅಣೆಕಟ್ಟು ನಿರ್ಮಾಣ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಅರಂತೋಡು : ಕಿಂಡಿಅಣೆಕಟ್ಟು ನಿರ್ಮಾಣಕ್ಕೆ ಸ್ಥಳ ಪರಿಶೀಲನೆ
