ಮಹಿಳಾ ದಿನಾಚರಣೆ ಎಲ್ಲರಿಗೂ ಒಳಿತನ್ನು ನೀಡಲಿ
ಹೆಚ್ಚಿನ ಕಡೆಗಳಲ್ಲಿ ರಾಜಕೀಯ ಹಾಗೂ ಇತರೆ ಸಂಘಟನೆಗಳಿಗೆ ಸಂಭಧಿಸಿದಂತೆ ಹಾಗೆ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸಮಾಜದಲ್ಲಿ ಕೆಲವೊಂದು ಕಡೆಗಳಲ್ಲಿ ಜನರು ಇನ್ನೂ ಬದಲಾಗಿಲ್ಲ…
ಇದು ಸಮಾಜದಲ್ಲಿ ನಡೆಯತಕ್ಕಂತ ನಿಜ ವಿಷಯ.
ಹೆಣ್ಣನ್ನು ಸಾಮಾಜಿಕವಾಗಿ ಪ್ರತೀ ಕೆಲಸದಲ್ಲೂ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬಳಸಿಕೊಳ್ಳೋದು, ಹಾಗೇನೆ ಸಮುದಾಯದಲ್ಲಿ ಸ್ವಚ್ಛತಾ ಕಾರ್ಯಕ್ರಮ ಅಂತ ಇಟ್ಟುಕೊಂಡು ಹೆಣ್ಣನ
ಕಸ ಕ್ಲೀನಿಂಗ್, ಸಗಣಿಗುಡಿಸುದಕ್ಕೆ,ಇತರೇ ಕೆಲಸಗಳಿಗೆ ಹೆಣ್ಣನ್ನ ಬಳಸಿಕೊಳ್ತಾರೆ…
ಇದೇ ಸಮಾಜದಲ್ಲಿ
ಕೆಲವು ಪ್ರಮುಖರಂತ ಮಹಿಳಾ ದಿನಾಚರಣೆ ಬಗ್ಗೆ ವೇದಿಕೆ ಮೇಲೆ ಭಾಷಣ ಮಾಡಲು ಬಿಟ್ಟರೆ ದೊಡ್ಡದಾಗಿ ಹೆಣ್ಣನ್ನ ಹೊಗಳಿ ಅಟ್ಟಕ್ಕೇರಿಸುತ್ತಾರೆಯೇ ಹೊರತು ಹೆಣ್ಣಿಗೆ ಯಾವುದೇ ಗೌರವ ಸ್ಥಾನ ಮಾನ , ಗೌರವಯುತವಾದ ಜವಾಬ್ದಾರಿಯನ್ನ ನಿರ್ವಹಿಸಲು ಬಿಡ್ತಿಲ್ಲ , ಹೆಣ್ಣು ಮಕ್ಕಳು ಮಾಡುವ ಒಳ್ಳೆಯ ಕೆಲಸಗಳಿಗೆ ಅಡ್ಡಿ ಬಂದು ಸಮಾಜದಲ್ಲಿ ಸರಿಯಾಗಿ ತಲೆಎತ್ತಲು ಬಿಡ್ತಿಲ್ಲ ,
ಸಮಾಜದಲ್ಲಿ ಬೆಳೆಯುತ್ತಿರುವ ಹೆಣ್ಣನ್ನ ತುಳಿಯುವವರೇ ಹೆಚ್ಚು ..ಸಮಾಜ ಇನ್ನೂ ಬದಲಾಗಬೇಕು..
ಹೆಣ್ಣನ್ನು ಇನ್ನೂ ಅಭಲೆ , ಹೆಣ್ಣು ಕೈಲಾಗದವಳು ಅಂದುಕೊಂಡವರು ಇನ್ನೂ ಸಮಾಜದಲ್ಲಿ ಇದ್ದಾರೆ…
ಇಂತಹವವರಿಗೆ ಈ ವರ್ಷದ ಮಹಿಳಾ ದಿನಾಚರಣೆ ಬದಲಾವಣೆ ತರುವಂತಾಗಲಿ ಎಲ್ಲಾ ಮಹಿಳೆಯರಿಗೂ….
ಶುಭವಾಗಲಿ ಸಮಾಜದಲ್ಲಿ
ಎಲ್ಲರಿಗೂ ಸದ್ಬುದ್ಧಿ ಸನ್ಮಾರ್ಗವನ್ನ ಕಾಣುವಂತಾಗಲಿ
ನಾಡಿನ ಸಮಸ್ತ ಜನತೆಗೆ ಮಹಿಳಾ ದಿನಾಚರಣೆಯ ಶುಭಾಶಯಗಳು
✍️ ದಿವ್ಯಲತ ಚೌಟಾಜೆ
ಮಹಿಳಾ ದಿನಾಚರಣೆ ಎಲ್ಲರಿಗೂ ಒಳಿತನ್ನು ನೀಡಲಿ
