ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ತಾಲೂಕು,ತೊಡಿಕಾನ ಗ್ರಾಮ ಸಮಿತಿ ವತಿಯಿಂದ
(10 ಕುಟುಂಬ 18 ಗೋತ್ರದ ವ್ಯಾಪ್ತಿಗೆ ಒಳಪಟ್ಟಂತೆ)
ಸುಳ್ಯ ತಾಲೂಕು ಮತ್ತು ಕಡಬ ತಾಲೂಕಿನ ಸೀಮಿತ ಗ್ರಾಮಗಳಿಗೆ ತೊಡಿಕಾನ ಮಲ್ಲಿಕಾರ್ಜುನ ದೇವಳದ ವಠಾರದಲ್ಲಿ ನಡೆದ ಹೊನಲು ಬೆಳಕಿನ
ಪುರುಷರ ಕಬಡ್ಡಿ ಪಂದ್ಯಾಟದಲ್ಲಿ ಐತ್ತೂರು ತಂಡ ಆದರ್ಶ ಹೊಸಮಠದ ವಿರುದ್ದ ರೋಚಕ 16.6 ಅಂತರದಿಂದ ಜಯಗಳಿಸಿ ಪ್ರಥಮ ಸ್ಥಾನ ಪಡಕೊಂಡಿದೆ.ಆದರ್ಶ ಹೊಸಮಠ ತಂಡ ದ್ವಿತೀಯ ಸ್ಥಾನ ಪಡಕೊಂಡಿತು.ಎಣ್ಮೂರು ತಂಡ ತೃತೀಯ ಸ್ಥಾನವನ್ನು,ಅರಂತೋಡು ಉಳುವಾರು ತಂಡ ಚತುರ್ಥ ಸ್ಥಾನವನ್ನು ಪಡಕೊಂಡಿತು.ಐತ್ತೂರು ತಂಡದ ಶ್ರತಿನ್ ಬೆಸ್ಟ್ ಕ್ಯಾಚರ್, ಪ್ರೋ ಕಬಡ್ಡಿ ಆಟಗಾರ ಮಿಥನ್ ಗೌಡ ಬೆಸ್ಟ್ ರೈಡರ್,ಆದರ್ಶ ಹೊಸಮಠದ ತಂಡದ ಅಜಿತ್ ಸರ್ವಾಂಗೀಣ ಆಟಗಾರರಾಗಿ ಹೊರಹೊಮ್ಮಿ ವೈಯಕ್ತಿಕ ಪ್ರಶಸ್ತಿ ಪಡಕೊಂಡರು.
ತೊಡಿಕಾನ : ಗೌಡ ಕಪ್ ಕಬಡ್ಡಿ ಪಂದ್ಯಾಟ,ಐತ್ತೂರು ತಂಡ ವಿನ್ನರ್,ಆದರ್ಶ ಹೊಸಮಠ ತಂಡ ರನ್ನರ್
