ಉಪ್ಪಿನಂಗಡಿ ಕುಮಾರಧಾರ ನದಿಯಲ್ಲಿ ಯುವಕನೋರ್ವನ ಶವ ಪತ್ತೆಯಾದ ಘಟನೆ ಮಾ.11 ರಂದು ನಡೆದಿದೆ.
ಕಡಬ ತಾಲೂಕಿನ ಗೋಳಿತೊಟ್ಟು ನಿವಾಸಿ ರವಿಚಂದ್ರ ಅವರ ಪುತ್ರ ಗಗನ್ ಮೃತ ಯುವಕ ಎಂದು ಗುರುತಿಸಲಾಗಿದೆ.
ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ಗಗನ್ ನಿನ್ನೆ ಬಾಡಿಗೆ ಎಂದು ಮನೆಯಿಂದ ಹೋಗಿದ್ದು, ಇಂದು ಮೃತದೇಹ ಉಪ್ಪಿನಂಗಡಿ ನದಿಯಲ್ಲಿ ಪತ್ತೆಯಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕುಮಾರಧಾರ ನದಿಯಲ್ಲಿ ರಿಕ್ಷಾ ಚಾಲಕನ ಶವ ಪತ್ತೆ
