ಅರಂತೋಡು – ಎಲಿಮಲೆ ಲೋಕೋಪಯೋಗಿ ರಸ್ತೆಯಲ್ಲಿ ರಸ್ತೆಯ ಧಾರಣಾ ಸಾಮರ್ಥ್ಯವನ್ನು ಪ್ರಕಟಿಸಿ, ಅಧಿಕ ಭಾರದ ವಾಹನಗಳನ್ನು ನಿರ್ಭಂದಿಸಿ ಸೂಚನಾ ಫಲಕ ಅಳವಡಿಸುವ ಬಗ್ಗೆ ಮನವಿ

ಅರಂತೋಡು – ಎಲಿಮಲೆ ಲೋಕೋಪಯೋಗಿ ರಸ್ತೆಯಲ್ಲಿ ರಸ್ತೆಯ ಧಾರಣಾ ಸಾಮರ್ಥ್ಯವನ್ನು ಪ್ರಕಟಿಸಿ, ಅಧಿಕ ಭಾರದ ವಾಹನಗಳನ್ನು ನಿರ್ಭಂದಿಸಿ ಸೂಚನಾ ಫಲಕ ಅಳವಡಿಸುವ ಬಗ್ಗೆ
ಕಾರ್ಯ ನಿರ್ವಾಹಕ ಅಭಿಯಂತರು
ಲೋಕೋಪಯೋಗಿ ಇಲಾಖೆಯವರಿಗೆ ಅಡ್ತಲೆ ನಾಗರೀಕ ಹಿತಾರಕ್ಷಣಾ ವೇದಿಕೆಯವರು ಮನವಿ ಸಲ್ಲಿಸಿದ್ದಾರೆ.
ಅರಂತೋಡು- ಎಲಿಮಲೆ ಜಿಲ್ಲಾ ಮುಖ್ಯ ರಸ್ತೆಯ ಸುಮಾರು 3 ಕಿಲೋಮೀಟರ್ ರಸ್ತೆ ಅಗಲೀಕರಣ ಹಾಗೂ 2ಕಿಲೋಮೀಟರ್ ಮರುಡಾಮರಿಕರಣ ಕಾಮಗಾರಿಯನ್ನು ತಮ್ಮ ಇಲಾಖೆಯು ಅತ್ಯಂತ ಉತ್ತಮವಾಗಿ ಕಳೆದ ಎರಡು ವರ್ಷಗಳ ಹಿಂದೆ ನಡೆಸಿರುತ್ತದೆ. ಊರಿನ ಸಾರ್ವಜನಿಕರ ಹಾಗೂ ರಸ್ತೆ ಬಳಕೆದಾರರ ಪರವಾಗಿ ತಮಗೂ ಹಾಗೂ ತಮ್ಮ ಇಲಾಖೆಗೂ ಅಭಿನಂದನೆಗಳು.
ರಸ್ತೆ ಅಭಿವೃದ್ಧಿಯ ನಂತರ ಈ ರಸ್ತೆಯಲ್ಲಿ ಮಿತಿಮೀರಿದ ಭಾರ ಹೊತ್ತ ಅನೇಕ ಲಾರಿಗಳು, ಟಿಪ್ಪರ್ ಗಳು ಅವ್ಯಾಹತವಾಗಿ ಸಂಚರಿಸುತ್ತಿರುವ ಕಾರಣದಿಂದ ರಸ್ತೆಯು ಸಂಪೂರ್ಣ ಹಾಳಾಗುವ ಸಂಭವ ಇದೆ. ಈ ರಸ್ತೆಯ ಧಾರಣಾ ಸಾಮರ್ಥ್ಯ ಎಷ್ಟು ಎಂಬ ಅರಿವು ಸಾರ್ವಜನಿಕರಿಗೆ ಮತ್ತು ಚಾಲಕರಿಗೆ ಇರುವುದಿಲ್ಲ. ಆದ್ದರಿಂದ ದಯವಿಟ್ಟು ತಮ್ಮ ಇಲಾಖೆಯ ವತಿಯಿಂದ ಈ ರಸ್ತೆಯಲ್ಲಿ ರಸ್ತೆಯ ಧಾರಣಾ ಸಾಮರ್ಥ್ಯದ ವಿವರಣೆ ಒಳಗೊಂಡ ಸೂಚನಾ ಫಲಕ ಹಾಕಬೇಕು.
ಅಲ್ಲದೇ ಪ್ರಸ್ತುತ ಈ ರಸ್ತೆಯಲ್ಲಿ ಸುಮಾರು 50 ಟನ್ ಗಿಂತಲೂ ಅಧಿಕ ಭಾರ ಸಾಗಿಸುವ ಟಿಪ್ಪರ್ ಗಳು ಹಾಗೂ ಲಾರಿಗಳು ನಿರಂತರ ಸಂಚರಿಸುತ್ತಿವೆ. ಒಂದು ವೇಳೆ ಈ ರಸ್ತೆಗೆ ಅಷ್ಟು ಭಾರ ಹೊರುವ ಸಾಮರ್ಥ್ಯ ಇಲ್ಲದಿದ್ದರೆ ಈ ಬಗ್ಗೆ ತಾವು ರಸ್ತೆ ಸುರಕ್ಷತಾ ಸಮಿತಿಯಲ್ಲಿ ಚರ್ಚಿಸಿ. ಧಾರಣಾ ಸಾಮರ್ಥ್ಯ ದ ಸೂಚನಾ ಫಲಕದಲ್ಲಿಯೇ ಅಧಿಕ ಭಾರದ ವಾಹನಗಳ ಸಂಚಾರವನ್ನು
ನಿರ್ಭಂದಿಸಿ ಪ್ರಕಟಣೆ ನೀಡಬೇಕು.ಎಲ್ಲ ಸಾರ್ವಜನಿಕರ ಹಾಗೂ ರಸ್ತೆಯ ಹಿತಾಸಕ್ತಿಗಾಗಿ ಈ ಮೂಲಕ ಮನವಿ ಮಾಡುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಈ ಸಂದರ್ಭದಲ್ಲಿ ನಾಗರೀಕ ಹಿತಾರಕ್ಷಣಾ ಸಮಿತಿಯ ಹರೀಪ್ರಸಾದ್ ಅಡ್ತಲೆ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Ad Widget 1 Ad Widget . Ad Widget . Ad Widget 1 Ad Widget . Ad Widget . Ad Widget . Ad Widget . Ad Widget . Ad Widget .1 Ad Widget .

Leave a Comment

Your email address will not be published. Required fields are marked *

error: Content is protected !!
Scroll to Top