ನಮ್ಮ ಶ್ರದ್ದಾ ಕೇಂದ್ರಗಳಾದ ಮಂದಿರಗಳು, ದೈವಸ್ಥಾನಗಳನ್ನು ಕಾಲ ಕಾಲಕ್ಕೆ ಜೀರ್ಣೋದ್ದಾರಗೊಳಿಸಿದಾಗ ನಮ್ಮ ಜೀವನದಲ್ಲಿ ಸುಖ ಶಾಂತಿಯಿಂದ ಇರಲು ಸಾಧ್ಯ” ಎಂದು ಶಾಸಕಿ ಭಾಗೀರಥಿ ಮುರುಳ್ಯ ಅಭಿಪ್ರಾಯಪಟ್ಟಿದ್ದಾರೆ.
ಅವರು ಸುಳ್ಯ ಬೂಡುವಿನ ಸತ್ಯಪದಿನಾಜಿ, ಕುಪ್ಪೆ ಪಂಜುರ್ಜಿ ಮತ್ತು ಗುಳಿಗ ಸಾನಿಧ್ಯ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಾಸಕರು ಈ ಭಾಗದ ಜನರ ಕೋರಿಕೆಯಂತೆ ಇಲ್ಲಿಗೆ ನೀರಿನ ವ್ಯವಸ್ಥೆಗಾಗಿ ಬೋರ್‌ವೆಲ್ ಕೊರೆಸಲು ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಕರ್ಲಪ್ಪಾಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ ಮೇನಾಲ ಧಾರ್ಮಿಕ ಉಪನ್ಯಾಸ ನೀಡಿ, ಕಲ್ಮಶ ಇಲ್ಲದ ಭಕ್ತಿಗೆ ದೇವರ ಒಲಿಯುತ್ತಾನೆ. ಈ ಸಮಾಜದಲ್ಲಿ ಧರ್ಮದ ಪರವಾಗಿ ಅನ್ಯಾಯದ ವಿರುದ್ಧ ಹೋರಾಟ ಮಾಡುವವರು ನಾವು.ಅದು ತುಳು ನಾಡಿನ ವಿಶೇಷ ಗುಣ” ಎಂದು ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬೂಡು ರಾಧಾಕೃಷ್ಣ ರೈ ಸಭಾಧ್ಯಕ್ಷತೆ ವಹಿಸಿದ್ದರು.
ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕೇಸರ ಡಾ.ಹರಪ್ರಸಾದ್ ತುದಿಯಡ್ಕ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಎನ್.ಎ.ರಾಮಚಂದ್ರ, ಸುಳ್ಯ ಶ್ರೀ ಶಾರದಾಂಬಾ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಸುಳ್ಯ ಕಾಯರ್ತೋಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ, ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ವಿಕ್ರಂ ಅಡ್ಪಂಗಾಯ, ಸುಳ್ಯ ನಗರ ಸದಸ್ಯರುಗಳಾದ ರಿಯಾಜ್ ಕಟ್ಟೆಕಾರ್, ವಿನಯ ಕುಮಾರ್ ಕಂದಡ್ಕ, ಶಿಲ್ಪಾ ಸುದೇವ್, ಸುಧಾಕರ ಕುರುಂಜಿಭಾಗ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಸುಳ್ಯ ಯೋಜನಾಧಿಕಾರಿ ಮಾಧವ ಗೌಡ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್, ನ್ಯಾಯವಾದಿ ಹರೀಶ್ ಬೂಡುಪನ್ನೆ, ಆದಿದ್ರಾವಿಡ ಯುವ ವೇದಿಕೆಯ ದ.ಕ.ಜಿಲ್ಲಾ ಅಧ್ಯಕ್ಷ ಸುಂದರ ಅಡ್ಡಂಗಾಯ, ಕೇರ್ಪಳ ಪಯಸ್ವಿನಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಚಂದ್ರಶೇಖರ ಕೇರ್ಪಳ, ದೈವಸ್ಥಾನದ ಆಡಳಿತ ಮೊಕ್ತೇಸರ ಮಾಯಿಲ ಬೂಡು, ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಬೂಡು ಅತಿಥಿಗಳಾಗಿ ಭಾಗವಹಿಸಿದರು.
ಚೈತ್ರಾ ಮತ್ತು ತೃಪ್ತಿ ತಂಡದವರು ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ಸ್ವಾಗತಿಸಿದರು. ರಮೇಶ್ ಬೂಡು ಪ್ರಾಸ್ತಾವಿಕ ಮಾತನಾಡಿದರು.
ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ನಮ್ಮ ಶ್ರದ್ಧಾ ಕೇಂದ್ರಗಳು ಜೀರ್ಣೋದ್ಧಾರಗೊಂಡಾಗ ಜೀವನದಲ್ಲಿ ಸುಖ ಶಾಂತಿ ನೆಲೆಸುತ್ತದೆ : ಭಾಗೀರಥಿ ಮುರುಳ್ಯ
