ದೈವರಾಧನೆ ಸಾಮರಸ್ಯದ ಸಂಕೇತ : ನಳೀನ್ ಕುಮಾರ್ ಕಟೀಲ್

ತುಳುನಾಡಿನಲ್ಲಿ ಹಿರಿಯರು ನಂಬಿಕೊಂಡು ಬಂದಿರುವಂತಹ ದೈವಾರಾಧನೆ ಸಾಮರಸ್ಯದ ಸಂಕೇತ ತವಾಗಿದೆ.ದೈವರಾಧನೆ,ನಾಗಾರಾಧನೆ ಇಲ್ಲಿನ ವಿಶೇಷತೆ. ದೈವಾರಾಧನೆಯಿಂದ ಎಲ್ಲರನ್ನು ಒಗ್ಗೂಡಿಸಲು
ಸಾಧ್ಯ.ದೈವಾರಾಧನೆಯ ಪಾಡ್ಡನಗಳಿಂದ ತುಳು ಸಂಸ್ಕೃತಿ,ಆಚಾರ,ವಿಚಾರ,ಪರಂಪರೆಗಳು ಉಳಿದಿದೆ” ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಾ.15 ರಂದು ಸುಳ್ಯ ಬೂಡು ಪರಿಸರದ ಸತ್ಯಪದಿನಾಜಿ,ಕುಪ್ಪೆ ಪಂಜುರ್ಲಿ ಮತ್ತು ಸಾನಿಧ್ಯ ಗುಳಿಗ ದೈವಗಳ ದೈವಸ್ಥಾನದ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯ ಸಮಾರೋಪ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಕೆ.ವಿ.ಜಿ.ಸಮೂಹ ವಿದ್ಯಾಸಂಸ್ಥೆಗಳ ಕಮಿಟಿ ಬಿ ಇದರ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಉಜ್ವಲ್‌ ಊರುಬೈಲ್, ಅರಂತೋಡು ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್‌ ಕುತ್ತಮೊಟ್ಟೆ, ನ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಉದ್ಯಮಿ ಹೇಮಂತ್ ಕಾಮತ್, ಶಾರದಾಂಬಾ ಸೇವಾ ಸಮಿತಿಯ ಗೌರವಾಧ್ಯಕ್ಷ ಕೆ.ಗೋಕುಲ್‌ದಾಸ್‌, ಅಧ್ಯಕ್ಷ ನಾರಾಯಣ ಕೇಕಡ್ಕ, ನ.ಪಂ. ಮಾಜಿ ಅಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಎನ್.ಎ.ರಾಮಚಂದ್ರ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಬೂಡು ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ಹಾಗೂ ಭಗವತಿ ಯುವ ಸೇವಾ ಸಂಘದ ಅಧ್ಯಕ್ಷ ಸುನಿಲ್ ಕೇರ್ಪಳ, ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಸದಸ್ಯ ಲಿಂಗಪ್ಪ ಗೌಡ ಕೇರ್ಪಳ, ಉಳ್ಳಾಕುಲು ಹಾಗೂ ಮಿತ್ತೂರು ದೈವದ ಹಿರಿಯ ಪೂಜಾರಿ ಮಿತ್ತೂರು ರವಿರಾಮ ರೈ, ಕುಕ್ಕನ್ನೂರು ಕಿನ್ನಿಮಾಣಿ-ಪೂಮಾಣಿ ದೈವಸ್ಥಾನದ ಪ್ರಧಾನ ಅರ್ಚಕ ಸುಭಾಷ್ ರೈ, ನಿವೃತ್ತ ಶಿಕ್ಷಕಿ ಮೀನಾಕ್ಷಿ ಆನಂದ ಗೌಡ, ಊರಿನ ಹಿರಿಯರಾದ ಮಾಧವ ಬೂಡು, ಕುಂಞ ಮೇಸ್ತ್ರಿ, ಸಿಎ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶೀನಪ್ಪ ಬಯಂಬು, ಆದಿ ದ್ರಾವಿಡ ಯುವ ವೇದಿಕೆ ಅಧ್ಯಕ್ಷ ಮೋನಪ್ಪ ಮಡಿವಾಳಮೂಲೆ, ಅಂಗನವಾಡಿ ಕಾರ್ಯಕರ್ತೆ ಕವಿತಾ ಬೂಡು, ದೈವಸ್ಥಾನದ ಆಡಳಿತ ಮೊಕ್ತಸರ ಮಾಯಿಲ ಬೂಡು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಕ್ಷ್ಮಣ ಬೂಡು, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಬೂಡು ಮತ್ತಿತರರು ಉಪಸ್ಥಿತರಿದ್ದರು.

Ad Widget . Ad Widget
Ad Widget . Ad Widget . . Ad Widget . Ad Widget . Ad Widget .
Ad Widget
Ad Widget Ad Widget . Ad Widget . Ad Widget . Ad Widget . Ad Widget . Ad Widget .1 Ad Widget .
. Ad Widget . Ad Widget . Ad Widget . Ad Widget 1 Ad Widget . Ad Widget . Ad Widget 1 Ad Widget 1 Ad Widget . Ad Widget . . Ad Widget .

Leave a Comment

Your email address will not be published. Required fields are marked *

error: Content is protected !!
Scroll to Top